ವಿಶ್ವದ ಅತಿ ಎತ್ತರದ ವ್ಯಕ್ತಿ ಹಾಗೂ ಕುಬ್ಜೆಯ ಸಮಾಗಮಕ್ಕೆ ಸಾಕ್ಷಿಯಾದ ಈಜಿಪ್ಟ್
ಅದು ಅತ್ಯಂತ ಕುತೂಹಲಕರ ಸನ್ನಿವೇಶ. ವಿಶ್ವದ ಅತಿ ಕುಬ್ಜ ಮಹಿಳೆ, ವಿಶ್ವದ ಅತಿ ಎತ್ತರದ ವ್ಯಕ್ತಿಯೊಂದಿಗೆ ಭಾವಚಿತ್ರಕ್ಕೆ ಫೋಸ್ ನೀಡಿದ ಅಪರೂಪದ ಕ್ಷಣ.
ಟರ್ಕಿಯ ಸುಲ್ತಾನ್ ಕೊಸೆನ್ ಎತ್ತರ 8 ಅಡಿ 9 ಇಂಚು. ಇವರನ್ನು ಭೇಟಿದಾದ್ದು ಜ್ಯೋತಿ ಅಮ್ಗೆ ಎಂಬ ವಿಶ್ವದ ಅತಿ ಕುಬ್ಜ ಮಹಿಳೆ. ಈಕೆಯ ಎತ್ತರ 62.8 ಸೆಂಟಿಮಿಟರ್ ಅಂದರೆ 2 ಅಡಿ 6 ಇಂಚು. ನಾಗ್ಪುರದ ಅಮ್ಗೆ ತನ್ನ ಕುಬ್ಜತೆಗಾಗಿ ಗಿನ್ನಿಸ್ ದಾಖಲೆ ಹೊಂದಿದ್ದಾರೆ.ಈ ಇಬ್ಬರು ವಿಶೇಷ ವ್ಯಕ್ತಿಗಳು ಸಮಾಗಮವಾದದ್ದು, ಈಜಿಪ್ಟ್ನ ಗಿಝಾ ನಗರದಲ್ಲಿ. 25 ವರ್ಷದ ಅಮ್ಗೆ ಮತ್ತು 36 ವರ್ಷದ ಕೊನೆಸ್ ನೀಲ್ ನದಿ ದಂಡೆಯ ಈ ನಗರದಲ್ಲಿ ಭೇಟಿಯಾದ ಭಾವಚಿತ್ರವನ್ನು ಸ್ಟ್ರೇಟ್ ಸೈಮ್ಸ್ ಪ್ರಕಟಿಸಿದೆ.
ಉಭಯ ಗಣ್ಯರನ್ನು ಈಜಿಪ್ಟ್ ಪ್ರವಾಸೋದ್ಯಮ ಉತ್ತೇಜನ ಮಂಡಳಿ, ದೇಶದಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಕಾರ್ಯತಂತ್ರದ ಅಂಗವಾಗಿ ಕರೆಸಲಾಗಿತ್ತು ಎಂದು "ಇಂಡಿಪೆಂಡೆಂಟ್" ವರದಿ ಮಾಡಿದೆ. ಇಬ್ಬರನ್ನೂ ಜತೆಗೆ ನಿಲ್ಲಿಸಿ ಛಾಯಾಗ್ರಾಹಕರು ಕ್ಲಿಕ್ಕಿಸಿದ್ದೇ ಕ್ಲಿಕ್ಕಿಸಿದ್ದು. ಈ ಚಿತ್ರಗಳು ಸಮಾಜ ಮಾಧ್ಯಮದಲ್ಲಿ ಹಲವು ಸಾವಿರಾರು ಟ್ವೀಟ್ - ಮರುಟ್ವೀಟ್ಗಳನ್ನು ಕಂಡಿವೆ.
ಪಿಟ್ಯುಟರಿ ಜೈಜಾಂಟಿಸಮ್ ಎಂಬ ಸ್ಥಿತಿಯಿಂದ ಕೊಸೆನ್ ಇಷ್ಟು ಎತ್ತರಕ್ಕೆ ಬೆಳೆದಿದ್ದಾರೆ. 2009ರಲ್ಲಿ ವಿಶ್ವದ ಅತೀ ಎತ್ತರದ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಇವರು ಪಾತ್ರರಾಗಿದ್ದಾರೆ.
Comments