ಈ 'ಮೆಸೇಜ್' ಬಂದ್ರೆ ಹುಷಾರಾಗಿರಿ ಜೋಕೆ.!
ನಿಮ್ಮ ಮೊಬೈಲ್ ನಂಬರ್ ಫ್ರೀ ಜಿಯೋ ಟಿವಿ ಆಫರ್ ಗೆದ್ದಿರೋದಾಗಿ ಅದರಲ್ಲಿ ಬರೆದಿರುತ್ತದೆ. ಅದನ್ನು ಪಡೆಯಲು ಲಿಂಕ್ ಕ್ಲಿಕ್ ಮಾಡುವಂತೆ ಸೂಚಿಸಲಾಗುತ್ತದೆ. ಯಾವುದೇ ಕಾರಣಕ್ಕೂ ಲಿಂಕ್ ಕ್ಲಿಕ್ ಮಾಡಬೇಡಿ, ಅಪ್ಪಿತಪ್ಪಿಯೂ ರಿಚಾರ್ಜ್ ಮಾಡಬೇಡಿ. ಮಾಡಿದ್ರೆ ನಿಮ್ಮ ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ ಮಾಹಿತಿ ವಂಚಕರ ಕೈಸೇರುತ್ತದೆ.
ಮೊಬೈಲ್ ಬಳಕೆದಾರರ ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ ಮಾಹಿತಿ ಪಡೆಯಲು ನಕಲಿ ಎಸ್ ಎಂ ಎಸ್ ಒಂದು ಹರಿದಾಡ್ತಿದೆ. ರಿಲಯೆನ್ಸ್ ಜಿಯೋ ಟಿವಿ ಫ್ರೀ ಆಫರ್ ಹೆಸರಲ್ಲಿ ವಂಚನೆ ಮಾಡಲಾಗ್ತಿದೆ. ಕೇವಲ 11 ರೂಪಾಯಿಗೆ 90 ದಿನಗಳ ಸಬ್ ಸ್ಕ್ರಿಪ್ಷನ್ ಹಾಗೂ ಉಚಿತ ಇನ್ ಸ್ಟಾಲೇಶನ್ ಕೊಡೋದಾಗಿ ಮೆಸೇಜ್ ಬರ್ತಿದೆ. ಹ್ಯಾಕರ್ ಗಳು ಗ್ರಾಹಕರ ಬಳಿ ಆನ್ ಲೈನ್ ನಲ್ಲಿ ಹಣ ಪಾವತಿಸುವಂತೆ ಹೇಳಿ ಅವರ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಮಾಹಿತಿ ಪಡೆಯುತ್ತಿದ್ದಾರೆ. jiodishtvshop.com ನಿಂದ ಅಮೆಜಿಂಗ್ ಆಫರ್ ಹೆಸರಲ್ಲಿ ಈ ಮೆಸೇಜ್ ಬರುತ್ತದೆ. AM-AMZOFF ಹೆಸರಲ್ಲಿ ಕೂಡ ಎಸ್ ಎಂ ಎಸ್ ಬಂದಿದೆ.
Comments