‘ಎಡಕಲ್ಲು ಗುಡ್ಡ’ ಚಿತ್ರದ ನಟ ಚಂದ್ರಶೇಖರ್ ವಿಧಿವಶ
ಬಾಲ ನಟನಾಗಿ ಚಿತ್ರರಂಗ ಪ್ರವೇಶಿಸಿದ್ದ ಚಂದ್ರಶೇಖರ್, ವಿಷ್ಣುವರ್ಧನ್, ರಾಜ್‌ಕುಮಾರ್ ಸೇರಿದಂತೆ ಹಲವು ನಟರೊಂದಿಗೆ ನಟಿಸಿದ್ದರು. ‘ನಮ್ಮ ಮಕ್ಕಳು’, ‘ಸಂಸ್ಕಾರ’, ‘ಪಾಪಪುಣ್ಯ’, ‘ವಂಶವೃಕ್ಷ’, ‘ಸೀತೆಯಲ್ಲ ಸಾವಿತ್ರಿ’, ‘ಎಡ ಲ್ಲು ಗುಡ್ಡದ ಮೇಲೆ’, ‘ಸಂಪ ತ್ತಿಗೆ ಸವಾಲ್’, ‘ಕಸ್ತೂರಿ ವಿಜಯ’, ‘ಸೊಸೆ ತಂದ ಸೌಭಾಗ್ಯ’ ಸೇರಿದಂತೆ ಇತ್ತೀಚಿನ ‘ತಾರಕ್’, ‘ಶಿವಲಿಂಗ ಅಸ್ತಿತ್ವ’ ಮುಂತಾದ ಹಲವು ಸಿನಿಮಾಗಳು ಸೇರಿದಂತೆ 40 ಚಿತ್ರಗಳಲ್ಲಿ ನಟಿಸಿದ್ದಾರೆ.
ಹಿರಿಯ ನಟ ‘ಎಡಕಲ್ಲು ಗುಡ್ಡ’ ಚಿತ್ರದ ನಟ ಚಂದ್ರಶೇಖರ್ ಅವರು ಹೃದಯಾಘಾತದಿಂದ ಶನಿವಾರ ಮುಂಜಾ ನೆ ಹೃದಯಾಘಾತದಿಂದ ಕೆನಡಾದಲ್ಲಿ ಇಹಲೋಕ ತ್ಯಜಿಸಿದ್ದಾರೆ. ‘3 ಗಂಟೆ 30 ದಿನ 30 ಸೆಕೆಂಡ್’ ಚಂದ್ರಶೇಖರ್ ನಟಿಸಿದ ಕೊನೆಯ ಸಿನಿಮಾ. 10 ದಿನಗಳ ಹಿಂದಷ್ಟೇ ಸಿನಿಮಾ ಪ್ರಚಾರದಲ್ಲಿ ಪಾಲ್ಗೊಂಡಿದ್ದರು. ನಂತರ ಬೆಂಗಳೂರಿನಿಂದ ಕೆನಡಾಗೆ ತೆರಳಿದ್ದರು. ಪತ್ನಿ ಶೀಲಾ ಪುತ್ರಿ ತಾನ್ಯಾ ಹಾಗೂ ಅನೇಕ ಅಭಿಮಾನಿ ಗಳನ್ನು ಅಗಲಿದ್ದಾರೆ.
Comments