ಕರ್ನಾಟಕ ಬಂದ್ : BMTC, ವೋಲ್ವೋ ಬಸ್ಗಳ ಸಂಚಾರ ಸ್ಥಗಿತ



ಇಂದು ಕರ್ನಾಟಕದಾದ್ಯಂತ ಮಹದಾಯಿಗಾಗಿ ಬಂದ್ ನಡೆಸಲಾಗುತ್ತಿದೆ. ಈ ನಿಟ್ಟಿನಲ್ಲಿ ಹಲವು ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.BMTC, ವೋಲ್ವೋ ಬಸ್ಗಳ ಸಂಚಾರವನ್ನು ಕೂಡ ಸ್ಥಗಿತಗೊಳಿಸಲಾಗಿದೆ. ಏರ್ಪೋರ್ಟ್ಗೆ ತೆರಳುತ್ತಿರುವ ಬಸ್ಗಳ ಸಂಚಾರ ಸ್ಥಗಿತವಾಗಿದೆ. ಬಿಎಂಟಿಸಿ ಬಸ್'ಗಳಿಲ್ಲದೇ ಪ್ರಯಾಣಿಕರು ಪರದಾಡುತ್ತಿದ್ದಾರೆ.
ಮಹದಾಯಿ ಹೋರಾಟಕ್ಕೆ ಮಾಲ್'ಗಳೂ ಕೂಡ ಬೆಂಬಲ ಸೂಚಿಸಿವೆ - ಮಂತ್ರಿ ಮಾಲ್'ನ್ನೂ ಕೂಡ ಬಂದ್ ಮಾಡಲಾಗಿದೆ. ಮಂತ್ರಿ ಮಾಲ್ ಮುಂದೆ ಪೊಲೀಸ್ ಭದ್ರತೆ ಒದಗಿಸಲಾಗಿದೆ.ಐಟಿ, ಬಿಟಿ ಕಂಪನಿಗಳಿಗೂ ಕೂಡ ಬಂದ್ ಬಿಸಿ ತಟ್ಟಿದ್ದು, ಮಾನ್ಯತಾ ಟೆಕ್ ಪಾರ್ಕ್'ನಲ್ಲಿ ಎಲ್ಲವೂ ಖಾಲಿ ಖಾಲಿಯಾಗಿದೆ. ಭದ್ರತೆ ದೃಷ್ಟಿಯಿಂದ ಮಾನ್ಯತಾ ಟೆಕ್ ಪಾರ್ಕ್ ಬಳಿ ಬಿಗಿ ಭದ್ರತೆ ಒದಗಿಸಲಾಗಿದೆ.ಎಂದಿನಂತೆ ಬಿಎಂಟಿಸಿ ನೌಕರರು ಕೆಲಸಕ್ಕೆ ಹಾಜರಾದರೂ ಕೂಡ ಅಧಿಕಾರಿಗಳು ಬಸ್'ಗಳನ್ನು ನೀಡುತ್ತಿಲ್ಲ. ಇನ್ನು ಕೆಎಸ್‌ಆರ್'ಟಿಸಿಯಿಂದಲೂ ಕೂಡ ಬಂದ್'ಗೆ ಬೆಂಬಲ ವ್ಯಕ್ತವಾಗಿದೆ. ಸಾರಿಗೆ ಇಲಾಖೆ ಅಧಿಕಾರಿಗಳು ಬಸ್'ಗಳ ಸಂಚಾರವಿಲ್ಲವೆಂದು ಪ್ರಯಾಣಿಕರಿಗೆ ಹೇಳುತ್ತಿದ್ದಾರೆ.
Comments