ಕರ್ನಾಟಕ ಬಂದ್: ಏನಿರುತ್ತೆ? ಏನಿರಲ್ಲ.?

ಬಿ.ಜೆ.ಪಿ. ಸಮಾವೇಶಗಳಿಗೆ ಅಡ್ಡಿಪಡಿಸುವ ಉದ್ದೇಶದಿಂದ ಕಾಂಗ್ರೆಸ್ ಬಂದ್ ದಿನದಲ್ಲಿ ಬದಲಾವಣೆ ಮಾಡಿಸಿದೆ ಎಂದು ಬಿ.ಜೆ.ಪಿ. ನಾಯಕರು ಆರೋಪಿಸಿದ್ದಾರೆ. ಜನವರಿ 25 ಕರ್ನಾಟಕ ಬಂದ್, ಫೆಬ್ರವರಿ 4 ರಂದು ಬೆಂಗಳೂರು ಬಂದ್ ಗೆ ಕರೆ ನೀಡಲಾಗಿದ್ದು, ಕೆಲವು ಸಂಘಟನೆಗಳು ಬೆಂಬಲ ನೀಡಿದ್ದರೆ, ಮತ್ತೆ ಕೆಲವು ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ. ಕಾಂಗ್ರೆಸ್ ಪ್ರಾಯೋಜಿತ ಬಂದ್ ಎಂದು ಆರೋಪಿಸಿರುವ ಬಿ.ಜೆ.ಪಿ. ಕೂಡ ಬಂದ್ ಬೆಂಬಲಿಸಿಲ್ಲ. ಹೀಗೆ ಗೊಂದಲದ ನಡುವೆಯೇ ನಾಳಿನ ಬಂದ್ ನಡೆಯಲಿದೆ.
ಮಹದಾಯಿ ವಿಚಾರವಾಗಿ ಕರ್ನಾಟಕ ಬಂದ್ ಗೆ ಕರೆ ನೀಡಲಾಗಿದೆ. ಪ್ರಧಾನಿ ಮಧ್ಯ ಪ್ರವೇಶಿಸಿ ಸಮಸ್ಯೆಯನ್ನು ಬಗೆಹರಿಸಬೇಕೆಂದು ಒತ್ತಾಯಿಸಿ ಬಂದ್ ಕೈಗೊಂಡಿದ್ದು, ಇದು ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ಆರೋಪ, ಪ್ರತ್ಯಾರೋಪಕ್ಕೆ ಕಾರಣವಾಗಿದೆ.
ನಾಳೆ ಏನೆಲ್ಲಾ ಇರುತ್ತೆ:
ಬಂದ್ ಸಮಯದಲ್ಲಿ ಅಗತ್ಯ ಸೇವೆಗಳಿಗೆ ತೊಂದರೆಯಾಗುವುದಿಲ್ಲ. ತುರ್ತು ಚಿಕಿತ್ಸೆ, ಆರೋಗ್ಯ ಸೇವೆ, ಮೆಡಿಕಲ್, ಹಾಲು, ತರಕಾರಿ, ಪೇಪರ್ ಪೂರೈಕೆ, ಮೆಟ್ರೋ ಸಾರಿಗೆ ಸೇವೆಯಲ್ಲಿ ವ್ಯತ್ಯವಾಗುವುದಿಲ್ಲ.
ಏನೆಲ್ಲಾ ಬಂದ್ ಆಗಲಿವೆ?
ಖಾಸಗಿ ಶಾಲೆಗಳಿಗೆ ರಜೆ ನೀಡಲಾಗುವುದು. ಅಂಗಡಿ, ಮುಂಗಟ್ಟುಗಳು, ಚಿತ್ರಮಂದಿರಗಳು, ಎ.ಪಿ.ಎಂ.ಸಿ. ಬಂದ್ ಆಗಲಿದ್ದು, ಖಾಸಗಿ ವಾಹನಗಳ ಸೇವೆಯಲ್ಲಿ ವ್ಯತ್ಯಯವಾಗಬಹುದಾಗಿದೆ.
Comments