ಕೆಲ ಕ್ಷಣಗಳ ಕಾಲ ಸ್ಥಗಿತ ಗೊಂಡ ಫೇಸ್ ಬುಕ್..!

ಸಾಮಾಜಿಕ ಜಾಲತಾಣಗಳ ಪೈಕಿ 'ಫೇಸ್ ಬುಕ್' ಅಗ್ರಸ್ಥಾನದಲ್ಲಿದೆ. ಭಾರತದಲ್ಲಿ ಫೇಸ್ ಬುಕ್ ಬಳಕೆದಾರರ ಸಂಖ್ಯೆಯಲ್ಲಿ ದಿನೇ ದಿನೇ ಹೆಚ್ಚಳವಾಗುತ್ತಲೇ ಇದೆ. ಬಳಕೆದಾರರನ್ನು ಸೆಳೆಯಲು ಫೇಸ್ ಬುಕ್ ಕೂಡಾ ಹಲವು ಹೊಸ ಫೀಚರ್ ಗಳನ್ನು ಪರಿಚಯಿಸುತ್ತಿದೆ. ಮಂಗಳವಾರ ರಾತ್ರಿ ಭಾರತದ ಫೇಸ್ ಬುಕ್ ಬಳಕೆದಾರರು ಲಾಗಿನ್ ಆಗುವಲ್ಲಿ ಸಮಸ್ಯೆಯನ್ನೆದುರಿಸಿದ್ದಾರೆ.
8-22 ರ ಸುಮಾರಿಗೆ ಈ ಸಮಸ್ಯೆ ಕಾಣಿಸಿಕೊಂಡಿದ್ದು, ಮೊದಲಿಗೆ ತಮ್ಮ ನೆಟ್ ವರ್ಕ್ ನಲ್ಲಿಯೇ ಸಮಸ್ಯೆಯಿದೆ ಎಂದು ಭಾವಿಸಿದ್ದವರು ಈ ಕುರಿತು ಮತ್ತೊಂದು ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಇದನ್ನು ಹಂಚಿಕೊಂಡ ವೇಳೆ ಬೇರೆಯವರೂ ಈ ಸಮಸ್ಯೆ ಎದುರಿಸುತ್ತಿದ್ದಾರೆಂಬುದರ ಅರಿವಾಗಿದೆ. ಕೆಲ ಕ್ಷಣದ ಬಳಿಕ ಇದು ಸರಿಯಾಗಿದ್ದು, ಬಳಕೆದಾರರಿಗೆ ಎಂದಿನಂತೆ ಫೇಸ್ ಬುಕ್ ಲಭ್ಯವಾಗಿದೆ. ಯಾವ ಕಾರಣಕ್ಕೆ ಫೇಸ್ ಬುಕ್ ಕೆಲ ಕ್ಷಣಗಳ ಕಾಲ ಡೌನ್ ಆಗಿತ್ತೆಂಬುದರ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ.
Comments