ಹೆಣ್ಣು ಮಕ್ಕಳ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡುತ್ತೇವೆ : ಎಚ್ ಡಿಕೆ
ನನಗೆ ದುಡ್ಡು ಮಾಡುವ ಉದ್ದೇಶ ಇಲ್ಲ, ನನ್ನ ಮಗನೂ ನಾನು ಆಸ್ತಿ ಮಾಡಿಲ್ಲ ಎಂದು ಕೇಳಲ್ಲ, ಅವನ ಭವಿಷ್ಯ ಅವನು ನೋಡಿಕೊಳ್ಳುತ್ತಾನೆ. ನನಗೆ ಹೈಕಮಾಂಡ್ ಇಲ್ಲ, ಹೈಕಮಾಂಡ್ ಗೆ ಹಣ ಕಳುಹಿಸುವ ವ್ಯವಸ್ಥೆಯು ನಮಗಿಲ್ಲ. ನನಗೆ ನೀವೆ ಹೈಕಮಾಂಡ್, ನೀವು ಹೇಳಿದಂತೆ ಕೆಲಸ ಮಾಡುತ್ತೇನೆ. ಕಾಂಗ್ರೆಸ್ ಸರ್ಕಾರದ ವಿರುದ್ದ ಮತ್ತೊಮ್ಮೆ ಪರೋಕ್ಷವಾಗಿ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ಬೆಂಗಳೂರಿಗೆ ಪರ್ಯಾಯವಾಗಿ ಬೆಳೆಯುತ್ತಿರುವ ನಗರ ಮಂಗಳೂರು, ಆದರೆ ಅಲ್ಲಿ ಕೋಮುವಾದ ಮಾಡಿಕೊಂಡಿದ್ದಾರೆ. ಮಂಗಳೂರಿನಲ್ಲಿ ಬಂದರು ಇದೆ, ಸಂಪನ್ಮೂಲಗಳು ಇದೆ. ಆ ನಗರವನ್ನು ಸಂಪೂರ್ಣ ಅಭಿವೃದ್ಧಿ ಮಾಡಬಹುದು.ಕುಮಾರ ಸ್ವಾಮಿ ಹೇಳಿಕೆ ಬೆಳ್ಳಂದೂರು ಕೆರೆಗೆ ಬೆಂಕಿ ಬಿದ್ದಿದೆ, ರಾಸಾಯನಿಕ ತುಂಬಿಕೊಂಡು ಬೆಂಕಿ ಬಿದ್ದಿದೆ. ಆದರೆ ಯಾರೊ ಬೆಂಕಿ ಹಾಕಿದ್ದಾರೆ ಎಂದು ಕೆಲವರು ಹೇಳುತ್ತಾರೆ. ನೀವು ನನಗೆ ಒಂದು ಅವಕಾಶ ನೀಡಿ, ಬೆಳ್ಳಂದೂರು ಕೆರೆ ಬೆಂಕಿ ಸಮಸ್ಯೆ ಒಂದು ತಿಂಗಳಲ್ಲಿ ಪರಿಹರಿಸುತ್ತೇನೆ. ಬೆಂಗಳೂರಿನ ಎಲ್ಲಾ ಕೆರೆ ಶುದ್ದಗೊಳಿಸುತ್ತೇನೆ.ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ, ಡಿವೈಎಸ್ಪಿಯೊಬ್ಬರ ಮನೆ ಬಳಿ ಪತ್ನಿಯ ಸರಗಳ್ಳತನ ವಾಗುವ ಪರಿಸ್ಥಿತಿ ಇದೆ. ಈ ಸರ್ಕಾರಕ್ಕೆ ಕಾನೂನು ಸುವ್ಯವಸ್ಥೆ ಕಾಪಾಡಲು ಸಾಧ್ಯವಾಗುತ್ತಿಲ್ಲ, ನಾನು ಅಧಿಕಾರಕ್ಕೆ ಬಂದರೆ ರಾಜ್ಯದ ಕಾನೂನು ಸುವ್ಯವಸ್ಥೆ ಭದ್ರಪಡಿಸುತ್ತೇನೆ. ಹೆಣ್ಣು ಮಕ್ಕಳ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡುತ್ತೇವೆ ಎಂದರು.ನಾನು ಇತ್ತೀಚೆಗೆ ಹಲವಾರು ಕ್ಷೇತ್ರಗಳ ಜನರ ಜೊತೆ ಸಂವಾದ ಕಾರ್ಯಕ್ರಮ ಮಾಡುತ್ತಿದ್ದೇನೆ. ಮುಂದೆ ರೈತರ ಜೊತೆ ಕೂಡಾ ಸಂವಾದ ನಡೆಸುತ್ತೇನೆ. ವಿದ್ಯಾರ್ಥಿಗಳ ಜೊತೆ ಸಂವಾದದಲ್ಲಿ ಹಲವಾರು ಪ್ರತಿಭೆಗಳು ಇರೋದನ್ನು ಗಮನಿಸಿದ್ದೇನೆ. ಸಣ್ಣ ಕೈಗಾರಿಕೆಗಳು ಹಲವು ಸಮಸ್ಯೆಗಳನ್ನು ಎದುರಿಸುತ್ತಿವೆ. ಇವುಗಳಿಗೆ ಸರ್ಕಾರದ ಕಾರ್ಯಕ್ರಮ ಯಾವ ರೀತಿ ಇರಬೇಕು ಅನ್ನೋ ಬಗ್ಗೆ ಯೋಚಿಸಿದ್ದೇನೆ ಎಂದರು.
Comments