ಸಿಎಂ ಸಿದ್ದರಾಮಯ್ಯನವರ ಜಾಹೀರಾತು ವಿಚಾರವಾಗಿ ಟಾಂಗ್ ಕೊಟ್ಟ ಎಚ್ ಡಿಕೆ

ನಾನು ಆಕಸ್ಮಿಕ ವಾಗಿ ರಾಜಕೀಯ ಕ್ಕೆ ಬಂದೆ. ನಮ್ಮ ತಂದೆಗೆ ನಾನು ರೈತನಾಗಬೇಕು ಅಂತಾ ಆಸೆ ಇತ್ತು. ಬಿಡದಿ ಬಳಿ ಭೂಮಿ ಯನ್ನೂ ಖರೀದಿಸಿದ್ದೆ. ಆದರೆ ರಾಜಕೀಯ ಏರುಪೇರಿನ ಸಂಧರ್ಭದಲ್ಲಿ ಮುಖ್ಯಮಂತ್ರಿಯಾದೆ. ನಾನು ಮುಖ್ಯಮಂತ್ರಿ ಆದಾಗ ದೇವೇಗೌಡರ ಮಗ ಅನ್ನೋದು ಬಿಟ್ಟು ಬೇರೆ ಅರ್ಹತೆ ಇರಲಿಲ್ಲ.
ಆದರೆ ಸಾಮಾನ್ಯ ಜ್ಞಾನ ಇಟ್ಟುಕೊಂಡು ಆಡಳಿತ ನಡೆಸಿದೆ. ಜನರ ಸಮಸ್ಯೆ ಗಳನ್ನು ಕೇಳಲು ಜನತಾ ದರ್ಶನ ಶುರು ಮಾಡಿದೆ. ಹೆಬ್ಬಾಳ ಬಳಿ ಸ್ಟೀಲ್ ಬ್ರಿಡ್ಜ್ ಮಾಡಲು ಅಂದೇ ಯೋಜನೆ ರೂಪಿಸಿದ್ದೆ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ರಾಜ್ಯ ಕೈಗಾರಿಕಾ ವಾಣಿಜ್ಮ ಮಹಾ ಸಂಸ್ಥೆಯಲ್ಲಿ ನಡೆದ ಸಂವಾದದಲ್ಲಿ ಬಿಚ್ಚಿಟ್ಟಿದ್ದು ಹೀಗೆ.
ಮುಂದೆ ಸಮ್ಮಿಶ್ರ ಸರ್ಕಾರ ಬರುತ್ತದೆ ಅಂತಾ ಹಲವರ ಭಾವನೆ ಇದೆ. ಆದರೆ ನಾವೇ ಪೂರ್ಣ ಪ್ರಮಾಣದಲ್ಲಿ ಅಧಿಕಾರಕ್ಕೆ ಬರುತ್ತೇವೆ ಅನ್ನೋ ವಿಶ್ವಾಸ ನನಗೆ ಇದೆ. ದೇಶಕ್ಕೆ ಮೆಟ್ರೋ ಯೋಜನೆ ಜಾರಿಗೆ ತಂದಿದ್ದೆ ದೇವೇಗೌಡರು ಪ್ರಧಾನಿ ಯಾಗಿದ್ದ ವೇಳೆ, ಆ ನಂತರ ರಾಜ್ಯದಲ್ಲಿ ಮೆಟ್ರೋ ಯೋಜನೆಗೆ ಒಪ್ಪಿಗೆ ಸೂಚಿಸಿದ್ದು ನನ್ನ ಅವಧಿಯಲ್ಲಿ, ಆದರೆ ಅದನ್ನು ನಾನು ಪ್ರಚಾರ ಮಾಡಲಿಲ್ಲ, ಪೇಪರ್ ಗಳಲ್ಲಿ ದೊಡ್ಡದಾಗಿ ನನ್ನ ಫೊಟೊ ಹಾಕಿಸಿಕೊಂಡು ಪ್ರಚಾರ ಪಡೆಯಲಿಲ್ಲ, ಸರ್ಕಾರಿ ಹಣವನ್ನು ನಾನು ಜಾಹೀರಾತಿಗೆ ಖರ್ಚು ಮಾಡಿಲ್ಲ, ಅದೇ ದುಡ್ಡನ್ನು ಅಭಿವೃದ್ಧಿ ಕಾರ್ಯಕ್ಕೆ ಬಳಸಿದೆ ಎನ್ನುವ ಮೂಲಕ ಸಿಎಂ ಅವರ ಜಾಹೀರಾತು ವಿಚಾರವಾಗಿ ಪರೋಕ್ಷವಾಗಿ ಟಾಂಗ್ ನೀಡಿದರು.
ನಾನು ಅಧಿಕಾರಕ್ಕೆ ಬಂದ ತಕ್ಷಣ ರೈತರ ಸಾಲಮನ್ನಾ ಮಾಡುವ ಮಾತು ಕೊಟ್ಟಿದ್ದೇನೆ. ಸುಮಾರು 50,000 ಕೋಟಿ ಹಣ ಮನ್ನಾ ಮಾಡಲು ಸಾಧ್ಯವೇ ಎಂಬ ಅನುಮಾನ ಕೆಲವರಲ್ಲಿದೆ. ಕೈಗಾರಿಕೋದ್ಯಮಿಗಳಿಗೂ ಈ ಬಗ್ಗೆ ಆತಂಕವಿದೆ. ಇಷ್ಟೊಂದು ಹಣ ಸಾಲ ಮನ್ನಾ ಮಾಡಿದ್ರೆ ನಮ್ಮ ಗತಿ ಏನು ಎಂಬ ಆತಂಕ ನಿಮಗಿರಬಹುದು. ಅಷ್ಟೊಂದು ಹಣ ಹೇಗೆ ಸಂಗ್ರಹಿಸಬಹುದು ಎಂದು ನನಗೆ ಗೊತ್ತಿದೆ ಎಂದರು. ಬೆಳ್ಳಂದೂರು ಕೆರೆ ಹೊತ್ತಿ ಉರಿಯುತ್ತಿದೆ. ಇಡೀ ದೇಶಕ್ಜೆ ಟೆಕ್ನಾಲಜಿ ಕೊಡುವವರಯ ನಾವು ಆದರೆ ನಾವು ಯಾವ ಪರಿಸ್ಥಿತಿ ಯಲ್ಲಿದ್ದೇವೆ. ಕಸದ ಸಮಸ್ಯೆ ಕೂಡಾ ಸಾಕಷ್ಟಿದೆ. ಒಮ್ಮೆ ಅಧಿಕಾರ ಕೊಟ್ಟು ನೋಡಿ ನಾನು ಕ್ಲೀನ್ ಸಿಟಿ ನಾನು ಕ್ಲೀನ್ ಸಿಟಿ ಮಾಡಿ ತೋರಿಸುತ್ತೇನೆ ಎಂದರು.
Comments