25ರಂದು ಬಂದ್ ಹಿನ್ನೆಲೆ ಕೆಎಸ್ ಆರ್ ಟಿಸಿ ಬಸ್ ಬಿಎಂಟಿಸಿ ಸ್ಥಗಿತ

ಬಿಎಂಟಿಸಿ ನೌಕರರ ಸಂಘಗಳು ಬಂದ್ ಗೆ ಬೆಂಬಲ ಸೂಚಿಸಿರುವ ಪರಿಣಾಮ ಜನವರಿ 25ರಂದು ರಾಜ್ಯಾದ್ಯಂತ ಯಾವುದೇ ಕೆಎಸ್ ಆರ್ ಟಿಸಿ ಮತ್ತು ನಗರದಲ್ಲಿ ಬಿಎಂಟಿಸಿ ಬಸ್ ಗಳು ಬೆಳಿಗ್ಗೆ 6 ರಿಂದ ಸಂಜೆ 6ರವರೆಗೆ ರಸ್ತೆಗಿಳಿಯುವುದಿಲ್ಲ.
ಹೊರ ನಗರಗಳಿಗೆ ತೆರಳುವ ಪ್ರಯಾಣಿಕರು, ಈಗಾಗಲೇ ಟಿಕೆಟ್ ಬುಕ್ ಮಾಡಿ ಕಾಯುತ್ತಿರುವ ಪ್ರಯಾಣಿಕರು ಅಂದು ಒದ್ದಾಡ ಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ. ಓಲಾ ಮತ್ತು ಟ್ಯಾಕ್ಸಿ ಸಂಘಟನೆಗಳೂ ಕೂಡ ಬಂದ್ಗೆ ಬೆಂಬಲ ಸೂಚಿಸಿರುವ ಕಾರಣ ಅಂದು ಓಲಾ ಮತ್ತು ಇತರ ಟ್ಯಾಕ್ಸಿ ಕೂಡಾ ಇರುವುದಿಲ್ಲ. ಬಸ್ ಸಂಚಾರ ಇಲ್ಲದ ಕಾರಣ ವಿದ್ಯಾರ್ಥಿಗಳೂ ಸಾಕಷ್ಟು ತೊಂದರೆ ಅನುಭವಿಸುವ ಸಾಧ್ಯತೆ ಇದೆ. ಜನವರಿ 25ರ ರಾಜ್ಯಬಂದ್ ಗೆ ಪರ-ವಿರೋಧ ಚರ್ಚೆಗಳು ಹುಟ್ಟಿ, ಬಿಜೆಪಿಯು ಇದೊಂದು ಸರ್ಕಾರ ಪ್ರಾಯೋಜಿತ ಬಂದ್ ಎಂದು ಕರೆದು ಗೇಲಿ ಮಾಡಿದೆ. ಇದರ ಬೆನ್ನಲ್ಲೆ ಕೆಲವು ಸಂಘಟನೆಗಳು ರಾಜ್ಯ ಬಂದ್ ಗೆ ನಮ್ಮ ಬೆಂಬಲ ಇಲ್ಲ ಎಂದು ಹೇಳಿವೆ, ಬಂದ್ ನಡೆಯುವುದೇ ಡೊಲಾಯಮಾನಯ ಸ್ಥಿತಿಯಲ್ಲಿದ್ದಾಗ ಕೆಎಸ್ ಆರ್ ಟಿಸಿ ಮತ್ತು ಬಿಎಂಟಿಸಿ ನೌಕರರ ಸಂಘ ಬಂದ್ ಗೆ ಬೆಂಬಲ ಸೂಚಿಸಿರುವುದು ಬಂದ್ ಆಯೋಜಿಸಿರುವ ಸಂಘಟನೆಗಳಿಗೆ ಆನೆ ಬಲ ಬಂದಿದೆ.
Comments