ಸಾಲು ಸಾಲು ರಜೆಯಿಂದ ಬ್ಯಾಂಕ್ ಬಂದ್ ಆಗಲಿವೆ, ಇಂದೇ ನಿಮ್ಮ ಕೆಲಸ ಮುಗಿಸಿಕೊಂಡು ಬಿಡಿ

ಬ್ಯಾಂಕ್ ಗ್ರಾಹಕರೇ ನಿಮಗೆ ಬ್ಯಾಂಕ್ ನಲ್ಲಿ ಏನೇ ಕೆಲಸವಿದ್ದರು ಕೂಡ ಇಂದೇ ನಿಮ್ಮ ಕೆಲಸಗಳನ್ನು ಮುಗಿಸಿಕೊಂಡು ಬಿಡಿ ಅದಕ್ಕೆ ಕಾರಣ ಜನವರಿ 25ರಂದು ರಾಜ್ಯ ಬಂದ್ ಸೇರಿದಂತೆ ನಾಲ್ಕು ದಿನಗಳ ಕಾಲ ಬ್ಯಾಂಕ್ ಗೆ ಸಾಲು ಸಾಲು ರಜೆ ಇರುವ ಹಿನ್ನಲೆಯಲ್ಲಿ ಬ್ಯಾಂಕ್ ವಹಿವಾಟು ಸೇರಿದಂತೆ, ಎಟಿಎಂ ಸೇವೆಗಳು ಬಹುತೇಕ ಸ್ಥಗಿತಗೊಳ್ಳಲಿದ್ದು, ಈ ನಿಟ್ಟಿನಲ್ಲಿ ಇಂದೇ ನಿಮ್ಮ ಬ್ಯಾಂಕ್ ವಹಿವಾಟಿಗೆ ಸಂಬಂಧಪಟ್ಟಂತೆ ನಿಮ್ಮ ಕೆಲಸ ಕಾರ್ಯಗಳನ್ನು ಮುಗಿಸಿಕೊಂಡು ಬಿಡಿ.
ಗುರುವಾರ ಅಂದರೆ 25ರಂದು ರಾಜ್ಯ ಬಂದ್ ಇರುವುದರಿಂದ ಅಂದು ಬಂದ್ ಹಿನ್ನಲೆಯಲ್ಲಿ ಬ್ಯಾಂಕ್ ಗಳು ಕೆಲಸ ಮಾಡುವುದು ಅನುಮಾನ, ಮರು ದಿವಸ ಅಂದ್ರೆ ಶುಕ್ರವಾರ 26 ರಂದು ಗಣರಾಜ್ಯದ ದಿವಸವಾಗಿರುವುದರಿಂದ ಅಂದೂ ಕೂಡ ಬ್ಯಾಂಕ್ ರಜೆಯಿರುತ್ತದೆ. ಮರು ದಿವಸ ಶನಿವಾರ ಅಂದರೆ ಜನವರಿ 27 ಅಂದು ಕೂಡ ಬ್ಯಾಂಕ್ ಗೆ ನಾಲ್ಕನೇ ಶನಿವಾರದ ರಜೆ ಇರುತ್ತದೆ, ಮರು ದಿವಸ 28 ಭಾನುವಾರ ರಜೆ ಇದೆ. ಹೀಗಾಗಿ ಸಾಲು ಸಾಲು ರಜೆಯಿಂದ ಬ್ಯಾಂಕ್ ಬಂದ್ ಆಗಲಿವೆ. ಏನಾದರೂ ಬ್ಯಾಂಕ್ ಕೆಲಸವಿದ್ದರೆ ಇಂದೇ ಮಾಡಿ ಮುಗಿಸಿಕೊಂಡರೆ ಒಳಿತು.
Comments