ಸಾಲದ ಚಿಂತೆಯಲ್ಲಿರುವ ರೈತರಿಗೆ ಗುಡ್ ನ್ಯೂಸ್
ಬಜೆಟ್ ನಲ್ಲಿ ಕೃಷಿ ವಲಯಕ್ಕೆ ಆದ್ಯತೆ ನೀಡಲು ಮುಂದಾಗಿದ್ದು, ಕೃಷಿ ಸಾಲ ಹೆಚ್ಚಿಸಲಾಗುವುದು. ಜೊತೆಗೆ ರಬ್ಬರ್, ಚಹಾ, ಕಾಫಿ ಮೊದಲಾದ ತೋಟಗಾರಿಕೆ ಬೆಳೆಗಳಿಗೆ ವಿಶೇಷ ನೆರವು ಪ್ಯಾಕೇಜ್ ಘೋಷಿಸುವ ಸಾಧ್ಯತೆ ಇದೆ.
2018 -19 ನೇ ಸಾಲಿನ ಕೇಂದ್ರ ಬಜೆಟ್ ಫೆಬ್ರವರಿ 1 ರಂದು ಮಂಡನೆಯಾಗಲಿದ್ದು, ಕಳೆದ ಸಾಲಿಗಿಂತ 1 ಲಕ್ಷ ಕೋಟಿ ರೂ. ನಷ್ಟು ಕೃಷಿ ಸಾಲ ಮತ್ತು ಬೆಳೆ ಸಾಲದ ಗುರಿಯನ್ನು ಏರಿಕೆ ಮಾಡುವ ಸಾಧ್ಯತೆ ಇದೆ. ಕೃಷಿ ಉತ್ಪಾದಕತೆಯನ್ನು ಹೆಚ್ಚಿಸುವ ಉದ್ದೇಶದಿಂದ ಬೆಳೆ ಸಾಲವನ್ನು ವಿಸ್ತರಿಸಲಾಗುವುದು. ಪ್ರಸಕ್ತ ಸಾಲಿನಲ್ಲಿ 10 ಲಕ್ಷ ಕೋಟಿ ರೂ. ಬೆಳೆ ಸಾಲದ ಗುರಿ ಹೊಂದಿದ್ದು, 2017 ರ ಸೆಪ್ಟಂಬರ್ ವೇಳೆಗೆ 6.25 ಲಕ್ಷ ಕೋಟಿ ರೂ. ಬೆಳೆ ಸಾಲವನ್ನು ವಿತರಿಸಲಾಗಿದೆ. 2018 -19 ನೇ ಸಾಲಿನ ಬಜೆಟ್ ನಲ್ಲಿ 11 ಲಕ್ಷ ಕೋಟಿ ರೂ. ಬೆಳೆ ಸಾಲದ ಗುರಿಯನ್ನು ಹೊಂದುವ ನಿರೀಕ್ಷೆ ಇದೆ.
Comments