ಆಫ್ ಲೈನ್ ಗೆ ಕಾಲಿಟ್ಟ ಅಮೆಜಾನ್
ಆನ್ ಲೈನ್ ಮಾರುಕಟ್ಟೆಯ ದೈತ್ಯ ಎನಿಸಿಕೊಂಡಿದ್ದ ಅಮೆಜಾನ್ ಕಂಪನಿ ಈಗ ಆಫ್ ಲೈನ್ ಗೂ ಕಾಲಿಟ್ಟಿದೆ. ಅಮೆಜಾನ್ ನ ನೂತನ ಮುಖ್ಯಕಚೇರಿ ಸಿಯಾಟಲ್ ನಲ್ಲಿ ಆಫ್ ಲೈನ್ ಮಳಿಗೆ ಕಾರ್ಯಾರಂಭ ಮಾಡಿದೆ. ಉಳಿದ ಸೂಪರ್ ಮಾರ್ಕೆಟ್ ಗಳಿಗಿಂತ್ಲೂ ಇದು ವಿಭಿನ್ನ ಹಾಗೂ ವಿಶಿಷ್ಟವಾಗಿದೆ.
ನಿಮಗೆ ಬೇಕಾದ ವಸ್ತುಗಳನ್ನು ತೆಗೆದುಕೊಂಡು ಹಣ ಪಾವತಿಸಲು ನೀವು ಕ್ಯಾಶ್ ಕೌಂಟರ್ ನಲ್ಲಿ ಕಾಯಬೇಕಾಗಿಲ್ಲ. ಬಿಲ್ಲಿಂಗ್ ಗಾಗಿ ಗಂಟೆಗಟ್ಟಲೆ ಕ್ಯೂನಲ್ಲಿ ನಿಲ್ಲಬೇಕಾಗಿಲ್ಲ. ಈ ಮಳಿಗೆಗೆ ಪ್ರವೇಶಿಸಲು ನೀವು ಅಮೆಜಾನ್ ಗೋ ಆಯಪ್ ಹೊಂದಿರಬೇಕು. ನಿಮ್ಮ ಫೋನ್ ನಲ್ಲಿರೋ QR ಕೋಡ್ ಸ್ಕ್ಯಾನ್ ಮಾಡಿದ ಬಳಿಕ ಒಳಗೆ ಬಿಡಲಾಗುತ್ತದೆ. ಮಳಿಗೆಗೆ ಎಂಟ್ರಿ ಕೊಟ್ಟ ಬಳಿಕ ನಿಮಗೆ ಬೇಕಾದ ಸಲಾಡ್, ಡ್ರಿಂಕ್, ಮೀಲ್ ಎಲ್ಲವನ್ನೂ ತೆಗೆದುಕೊಳ್ಳಿ. ಅಲ್ಲಿಂದ ಹೊರಟುಬಿಡಿ. ಹಣ ಪಾವತಿಸಲು ನಗದು ಕೊಡಬೇಕಾಗಿಲ್ಲ. ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಸ್ವೈಪ್ ಮಾಡಬೇಕಾಗಿಯೂ ಇಲ್ಲ. ನೀವು ಖರೀದಿಸಿರುವ ವಸ್ತುಗಳ ಮೊತ್ತ ಆಟೋಮ್ಯಾಟಿಕ್ ಆಗಿ ನಿಮ್ಮ ಅಮೆಜಾನ್ ಖಾತೆಯಿಂದ ಪಾವತಿಯಾಗುತ್ತದೆ. ಈ ತಂತ್ರಜ್ಞಾನವನ್ನು ಎಲ್ಲಾ ಕಡೆ ಪರಿಚಯಿಸಲು ಅಮೆಜಾನ್ ಮುಂದಾಗಿದೆ.
Comments