ಈ ನೇಲ್ ಪಾಲಿಶ್ ಬೆಲೆ ಕೇಳಿದ್ರೆ ಶಾಕ್ ಹಾಗ್ತಿರಾ...!
ಚಿನ್ನಾಭರಣ, ಕಾರುಗಳು ಇವೆಲ್ಲ ಕೋಟ್ಯಾಂತರ ರೂಪಾಯಿ ಬೆಲೆಬಾಳುತ್ತವೆ ಅನ್ನೋದು ಎಲ್ಲರಿಗೂ ಗೊತ್ತಿದೆ. ಆದ್ರೆ ಕೋಟಿಗಟ್ಟಲೆ ಮೌಲ್ಯದ ನೇಲ್ ಪಾಲಿಶ್ ಬಗ್ಗೆ ನೀವೆಲ್ಲಾದ್ರೂ ಕೇಳಿದ್ದೀರಾ? ಲಾಸ್ ಎಂಜಲೀಸ್ ಮೂಲದ ಕಂಪನಿಯೊಂದು ತಯಾರಿಸಿರುವ ಬ್ಲಾಕ್ ಡೈಮಂಡ್ ನೇಲ್ ಪಾಲಿಶ್ ಬೆಲೆ ಕೇಳಿದ್ರೆ ನೀವು ದಂಗಾಗೋದು ಗ್ಯಾರಂಟಿ.
Azature ಎಂಬ ಕಂಪನಿ ತಯಾರಿಸಿರುವ ಈ ನೇಲ್ ಪಾಲಿಶ್ ನಲ್ಲಿ 267 ಕ್ಯಾರೆಟ್ ವಜ್ರವಿದೆ. ಇದರ ಬೆಲೆ ಬರೋಬ್ಬರಿ 1,63,66,000 ರೂಪಾಯಿ. ಈ ಉಗುರು ಬಣ್ಣ 14.7 ಮಿಲಿ ಲೀಟರ್ ನಷ್ಟಿದೆ. ಅದರಲ್ಲಿರೋ ವಜ್ರದ ಬೆಲೆಯೇ 1,59,83,750 ರೂಪಾಯಿ. ಇಷ್ಟಕ್ಕೇ ಶಾಕ್ ಆಗ್ಬೇಡಿ, ಬ್ಲಾಕ್ ಡೈಮಂಡ್ ಮೆನಿಕ್ಯೂರ್ ಕೂಡ ಮಾಡಲಾಗುತ್ತದೆ. ಇದಕ್ಕಾಗಿ ಒಂದು ಉಗುರಿಗೆ 1,76,930 ಖರ್ಚಾಗುತ್ತದೆ. ವಜ್ರದ ನೇಲ್ ಪಾಲಿಶ್ ಈಗಾಗ್ಲೇ ಮಾರುಕಟ್ಟೆಗೆ ಬಂದಿದ್ದು, ಹಾಟ್ ಕೇಕ್ ನಂತೆ ಸೇಲ್ ಆಗ್ತಿದೆ.
Comments