ವಾಟ್ಸಪ್ ಬಳಕೆದಾರರು ಗಮನಿಸಬೇಕಾದ ವಿಷಯ…!!
ಪ್ರಪಂಚದಲ್ಲೆ ಅತ್ಯಂತ ಡಿಮ್ಯಾಂಡಿಂಗ್ ಮತ್ತು ಯೂಸೇಬಲ್ ಸೋಶಿಯಲ್ ಮೀಡಿಯಾದಲ್ಲಿ ವಾಟ್ಸಪ್ ಕೂಡ ಒಂದಾಗಿದೆ. ಈ ವಾಟ್ಸಪ್ ಇದೀಗ ಹೊಸ ಫೀಚರ್‌ನೊಂದಿಗೆ ಗ್ರಾಹಕರ ಮುಂದೆ ಬರಲಿದೆ.
ಹೌದು... ವಾಟ್ಸಪ್ ತನ್ನ ಗ್ರಾಹಕರಿಗಾಗಿ ಹಣ ಪಾವತಿ ಸೌಲಭ್ಯ ಪ್ರಾರಂಭಿಸಲಿದ್ದು, ಈ ನೂತನ ಸೌಲಭ್ಯ ಬಳಸಿಕೊಂಡು ಗ್ರಾಹಕರು ಹಣ ವರ್ಗಾವಣೆ, ಪಾವತಿ ನಡೆಸಬಹುದಾಗಿದೆ. ಈ ನೂತನ ಸೌಲಭ್ಯವು ಫೆಬ್ರವರಿ ತಿಂಗಳ ಅಂತ್ಯದ ವೇಳೆಗೆ ವಾಟ್ಸಪ್‌ನಲ್ಲಿ ಅಳವಡಿಸಲಾಗುತ್ತದೆ ಎಂದು ತಿಳಿದು ಬಂದಿದೆ.ವಾಟ್ಸಪ್ ಮುಖೇನ ಹಣ ಕಳಿಸುವ ಹಾಗೂ ಸ್ವೀಕರಿಸುವವರನ್ನು ಸಂಸ್ಥೆಯು ಬ್ಯಾಂಕ್ ಎಂಡ್‌ನಿಂದ ಗುರುತಿಸಲಿದೆ. ಪೇಮೆಂಟ್ ಆಯ್ಕೆಯನ್ನು ಗ್ರಾಹಕರ ಬ್ಯಾಂಕ್ ಖಾತೆಗಳೊಡನೆ ಜೋಡಣೆಯಾದ ನಂತರ ಆಯಾ ಬ್ಯಾಂಕ್ ಖಾತೆಗಳನ್ನು ವಾಟ್ಸಪ್ ಪತ್ತೆ ಹಚ್ಚುತ್ತದೆ.ದೇಶದಲ್ಲಿನ ಬೃಹತ್ ಬ್ಯಾಂಕ್‌ಗಳೊಡನೆ ವಾಟ್ಸಪ್ ಇದಾಗಲೇ ಪೇಮೆಂಟ್ ಆಯ್ಕೆ ಸಂಬಂಧ ಮಾತುಕತೆ ನಡೆಸಿದೆ. ಜತೆಗೆ ಇದಕ್ಕಾಗಿ ಕೇಂದ್ರ ಸರ್ಕಾರದಿಂದ ಅನುಮತಿ ಸಹ ಪಡೆದುಕೊಂಡಿದೆ ಎಂಬ ಮಾತು ಕೇಳಿ ಬಂದಿದೆ.
Comments