ಏರ್‌ಟೆಲ್‌ಗಿಂತಲೂ ಸರಾಸರಿ ಹೆಚ್ಚು ಆದಾಯ ಗಳಿಸಿ ಜಿಯೋ ಅಚ್ಚರಿ ಮೂಡಿಸಿದೆ.!
ಜಿಯೋ ಇದೇ ಮೊದಲ ಸಾರಿ ಆದಾಯವನ್ನು ಗಳಿಸಿರುವುದರಿಂದ ಜಿಯೋ ಪಾಲುದಾರರು ಖುಷಿಯಾಗಿದ್ದಾರೆ. ಅತ್ಯಂತ ಕಡಿಮೆ ಬೆಲೆಯಲ್ಲಿಯೂ ಉತ್ತಮ ಸೇವೆ ನೀಡುವ ಮೂಲಕ ಜಿಯೋ ಗ್ರಾಹಕರ ಪ್ರೀತಿಯ ಜೊತೆಗೆ ಆದಾಯವನ್ನು ಗಳಿಸಿದೆ ಎಂದು ಜಿಯೋ ಪಾಲುದಾರರು ಅಂಬಾನಿ ಕಾರ್ಯಕ್ಕೆ ಶ್ಲಾಘಿಸಿದ್ದಾರೆ.
ನೆನ್ನೆಯಷ್ಟೆ ಮೂರನೇ ತ್ರೈಮಾಸಿಕ ವರದಿಯನ್ನು ಬಿಡುಗಡೆ ಮಾಡಿದ್ದ ಏರ್‌ಟೆಲ್ ಸತತ ಏಳನೇ ಬಾರಿ ನಷ್ಟವಾಗಿರುವ ಬಗ್ಗೆ ಮಾಹಿತಿ ನೀಡಿತ್ತು. ಪ್ರಸಕ್ತ ವರ್ಷ 306 ಕೋಟಿ ನಿವ್ವಳ ಲಾಭವನ್ನು ಏರ್‌ಟೆಲ್ ಕಳೆದುಕೊಂಡಿದ್ದು, ಜಿಯೋ ಮಾತ್ರ 504 ಕೋಟಿ ಲಾಭವನ್ನು ಗಳಿಸಿದೆ. ದಕ್ಷತೆ ಮತ್ತು ಸರಿಯಾದ ಕ್ರಮಗಳನ್ನು ಈ ಬಾರಿಯ ಜಿಯೋ ಆದಾಯವು ಪ್ರತಿಬಿಂಬಿಸುತ್ತಿದೆ. ಜಿಯೋ ತನ್ನ ಪ್ರಬಲ ಆರ್ಥಿಕ ಕಾರ್ಯಕ್ಷಮತೆಯನ್ನು ಉಳಿಸಿಕೊಳ್ಳಬಹುದೆಂದು ಸ್ಪಷ್ಟಪಡಿಸಿದೆ. ಇದಕ್ಕೆ ಜಿಯೋ ಗ್ರಾಹಕರಿಗೆ ನಮ್ಮ ಧನ್ಯವಾದಗಳು ಎಂದು ಅಂಬಾನಿ ಹೇಳಿದ್ದಾರೆ. ಡೇಟಾ ಕ್ರಾಂತಿಯಲ್ಲಿ ಜಿಯೋ ಜೊತೆಗೆ ಪಾಲುದಾರಿಕೆ ಹೊಂದ್ದಿವವರೆಲ್ಲರೂ ಸೇರಿ ಬಾರತವನ್ನು ಜಾಗತಿಕ ಡಿಜಿಟಲ್ ಮನೆಯನ್ನಾಗಿ ಮಾಡಿದ್ದಾರೆ. ಇಂತಹ ಒಂದು ದೊಡ್ಡ ಸಾಧನೆಗಾಗಿ ನಮ್ಮ ನೌಕರರು ಮತ್ತು ಪಾಲುದಾರರನ್ನು ಅಭಿನಂದಿಸುತ್ತೇನೆ 'ಎಂದು ಅವರು ಹೇಳಿದ್ದಾರೆ. ಪ್ರತಿ ಬಳಕೆದಾರರಿಂದ ಏರ್‌ಟೆಲ್‌ಗಿಂತಲೂ ಸರಾಸರಿ ಹೆಚ್ಚು ಆದಾಯ ಗಳಿಸಿ ಜಿಯೋ ಅಚ್ಚರಿ ಮೂಡಿಸಿದೆ. ಜಿಯೊ ಪ್ರತಿ ಬಳಕೆದಾರರಿಗೆ ಸರಾಸರಿ ಆದಾಯವು (ARPU) 154 ರೂ.ಗಳಿದ್ದರೆ, ಇದೇ ಅವಧಿಯಲ್ಲಿ ಭಾರತಿ ಏರ್‌ಟೆಲ್‌ನ ಪ್ರತಿ ಬಳಕೆದಾರ ಸರಾಸರಿ ಆದಾಯ 123ರೂ.ಗೆ ಇಳಿದಿದೆ.
Comments