ವಾಹನ ಸವಾರರಿಗೆ ಗುಡ್ ನ್ಯೂಸ್ ..!!
ದೇಶದಲ್ಲಿಯೇ ಮೊದಲ ಬಾರಿಗೆ ಡಿಜಿ ಲಾಕರ್ ವ್ಯವಸ್ಥೆ ಅಳವಡಿಕೆಗೆ ಸಾರಿಗೆ ಇಲಾಖೆ ಮುಂದಾಗಿದೆ. ಪೊಲೀಸರು, ಸಾರಿಗೆ ಇಲಾಖೆಯವರು ವಾಹನಗಳ ತಪಾಸಣೆ ಮಾಡುವ ಸಂದರ್ಭದಲ್ಲಿ ವಾಹನ ಸವಾರರು ತಮ್ಮ ಮೊಬೈಲ್ ನಲ್ಲಿಯೇ ದಾಖಲಾತಿಗಳನ್ನು ತೋರಿಸಬಹುದಾಗಿದೆ. ರಾಜ್ಯದಲ್ಲಿ ಈ ಪ್ರಯೋಗ ಯಶಸ್ವಿಯಾದಲ್ಲಿ ಹಂತ, ಹಂತವಾಗಿ ಉಳಿದ ರಾಜ್ಯಗಳಲ್ಲಿಯೂ ಜಾರಿಗೆ ಕೇಂದ್ರ ಸರ್ಕಾರ ಪ್ಲಾನ್ ಮಾಡಿದೆ.
ದಾಖಲೆ ಮತ್ತು ಪ್ರಮಾಣ ಪತ್ರಗಳನ್ನು ಡಿಜಿಟಲ್ ರೂಪದಲ್ಲಿ ಸಂಗ್ರಹಿಸಿ, ವಿತರಿಸುವ ಹಾಗೂ ದೃಢೀಕರಿಸುವ ಯೋಜನೆ ಇದಾಗಿದೆ. ವಾಹನ ಚಾಲನಾ ಪರವಾನಿಗಿ ಪತ್ರ, ವಾಹನ ನೋಂದಣಿ ಪ್ರಮಾಣ ಪತ್ರ, ಇನ್ಶೂರೆನ್ಸ್ ದಾಖಲೆ ಮೊದಲಾದ ದಾಖಲಾತಿಗಳನ್ನು ಡಿಜಿ ಲಾಕರ್ ನಲ್ಲಿ ಸೇವ್ ಮಾಡಿಕೊಂಡು ಇವೇ ದಾಖಲೆಗಳನ್ನು ತಪಾಸಣೆ ಸಂದರ್ಭದಲ್ಲಿ ತೋರಿಸಬಹುದಾಗಿದೆ. ಡಿಜಿ ಲಾಕರ್ ವ್ಯವಸ್ಥೆಯಡಿ ಎಲ್ಲಾ ದಾಖಲೆಗಳನ್ನು ಸೇವ್ ಮಾಡಿಟ್ಟುಕೊಳ್ಳಬಹುದಾಗಿದ್ದು, ಈಗಾಗಲೇ ವಿವಿಧ ಸೇವೆಗಳಲ್ಲಿ ಇದನ್ನು ಬಳಸಲಾಗ್ತಿದೆ.
Comments