ನನ್ನ ಅಸ್ತಿತ್ವ ಕ್ಕೆ ಕಾಶಿನಾ ಥ್ ರವರೆ ಕಾರಣ : ಉಪೇಂದ್ರ

ಕಾಶಿನಾಥ್ ಉಪೇಂದ್ರ ರವರಿಗೆ ಕೆಲಸ ಮಾಡಲು ಅವಕಾಶ ನೀಡಿದಾಗ ಅವರು ಕಾಲೇಜಿನಲ್ಲಿದ್ದರು. "ಅವರು ನನಗೆ ಎಲ್ಲಾ ಕೌಶಲ್ಯಗಳನ್ನು ಕಲಿಸಿದರು. ಅವರ ಯೋಜನೆ ಮತ್ತು ವೈಜ್ಞಾನಿಕ ವಿಧಾನವು ಪ್ರಮುಖ ಗುಣಲಕ್ಷಣಗಳಾಗಿದ್ದವು. ಅವರು ಮತ್ತು ನಾನು ಒಂದೇ ರೀತಿ ಆಲೋಚಿಸುತ್ತಿದ್ದೆವು ನಮ್ಮಿಬ್ಬರ ಸಮನ್ವಯತೆ ಉತ್ತಮವಾಗಿತ್ತು ಎಂದು ಉಪ್ಪಿ ತಿಳಿಸಿದ್ದಾರೆ.
ತ್ರೀವ ಅನಾರೋಗ್ಯದಿಂದ ಬಳಲುತ್ತಿದ್ದ ಕನ್ನಡದ ನಟ, ನರ್ದೇಶಕ, ನಿರ್ಮಾಪಕ ಕಾಶಿನಾಥ್ ನಿನ್ನೆಯಷ್ಠೇ ಇಹಲೋಕವನ್ನು ತ್ಯಜಿಸಿದರು. ಕನ್ನಡ ಚಿತ್ರರಂಗದ ಸೂಪರ್ ಸ್ಟಾರ್ ಉಪೇಂದ್ರ ಅವರು ಕಾಶಿನಾಥ್ ಬಗ್ಗೆ ಹೇಳುತ್ತಾ ಕಂಬನಿ ಮಿಡಿದಿದ್ದಾರೆ ಕಾಶಿನಾಥ್ ಅವರು ಸಿನೆಮಾಕ್ಕೆ ನೀಡಿದ ಕೊಡುಗೆಗಳನ್ನು ಪ್ರೀತಿಯಿಂದ ನೆನಪಿಸಿಕೊಂಡರು. "ನನ್ನ ಅಸ್ತಿತ್ವ ಕ್ಕೆ ಕಾಶಿನಾ ಥ್ ಕಾರಣ. ಅವರು ನನ್ನ ಗುರು ಮತ್ತು ನನ್ನ ಮಾರ್ಗದರ್ಶಕ . ಸಿನೆಮಾದಲ್ಲಿ ನಾನು ಸಾಧಿಸಿ ದ್ದು ಕಡಿಮೆ , ಇಂದು ಚಿತ್ರರಂಗದಲ್ಲಿ ನಾನು ಏನಾದರೂ ಸಾಧನೆ ಮಾಡಿದ್ದೇನೆ ಎಂದರೆ ಅದು ಅವರಿಂದಲೇ. ನನ್ನ ಎಲ್ಲಾ ಸಾಧನೆಗಳ ಹಿಂದೆ ಕಾಶಿನಾಥ್ ಇದ್ದಾರೆಂದು ಹೇಳಿದ್ದಾರೆ. ಚಲನಚಿತ್ರೋದ್ಯಮದಲ್ಲಿ ತಮ್ಮ ಆರಂಭಿಕ ದಿನಗಳನ್ನು ನೆನಪಿಸಿಕೊಳ್ಳುತ್ತಾ , ಉಪೇಂದ್ರ ಅವರು , " ನಾನು ಮೊದಲ ಬಾರಿ ಅವರನ್ನು ಭೇಟಿ ಮಾಡಿದಾಗ ನಾನು ಬರೆದ ಎಲ್ಲವನ್ನೂ ತೆಗೆದುಕೊಂ ಡು ಹೋಗಿ ಅವರೊಂದಿಗೆ ತೋರಿಸಿದ್ದೆ . ಅವರು ನನ್ನಿಂದ ತೆಗೆದುಕೊಂಡು ಮರುದಿನ ಬರಲು ಹೇಳಿದರು . ನಾನು ಅವರನ್ನು ಮತ್ತೆ ಭೇಟಿಯಾದಾಗ , ನನ್ನೊಂದಿಗೆ ಕೈಜೋಡಿಸಿ ಸಹಾಯ ಮಾಡುವಂತೆ ತಿಳಿಸಿದರು. ಆ ಬಳಿಕ ನಾನು ಸಹಾಯಕ ನಿರ್ದೇಶಕನಾಗಿ ಚಿತ್ರರಂಗದಲ್ಲಿ ನನ್ನ ಪ್ರಯಾಣವನ್ನು ಆರಂಭಿಸಿದ್ದೆ.
Comments