ಉಪ ರಾಷ್ಟ್ರಪತಿ ವೆಂಕಯ್ಯನಾಯ್ಡು ಪಾದರಕ್ಷೆ ಕಳವು

ಮೋನೋಟ್ಯಾಪ್ ನಲ್ಲಿರುವ ಸಂಸದರ ನಿವಾಸಕ್ಕೆ ಭೇಟಿ ನೀಡಿದ್ದ ವೆಂಕಯ್ಯ ನಾಯ್ಡು ಮನೆಯ ಹೊರಗೆ ಪಾದರಕ್ಷೆ ಬಿಟ್ಟು ಒಳಗೆ ಹೋಗಿದ್ದಾರೆ. ಅವರು ಹೊರಗೆ ಬಂದು ನೋಡಿದಾಗ, ಪಾದರಕ್ಷೆ ಕಾಣೆಯಾಗಿರುವುದು ಗೊತ್ತಾಗಿದೆ. ಅವರ ಸಿಬ್ಬಂದಿ ಕಾಣೆಯಾದ ಪಾದರಕ್ಷೆಗಳಿಗಾಗಿ ಹುಡುಕಾಡಿದ್ದಾರೆ. ಪಾದರಕ್ಷೆ ಸಿಗದಿದ್ದಾಗ ಹೊಸ ಪಾದರಕ್ಷೆಗಳನ್ನು ಧರಿಸಿ ವೆಂಕಯ್ಯ ನಾಯ್ಡು ತೆರಳಿದ್ದಾರೆ ಎನ್ನಲಾಗಿದೆ.
ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರ ಪಾದರಕ್ಷೆಗಳು ನಾಪತ್ತೆಯಾಗಿದ್ದು, ಸಿಬ್ಬಂದಿ ಹುಡುಕಾಟ ನಡೆಸಿದ್ದಾರೆ. ಬೆಂಗಳೂರು ಪ್ರವಾಸದಲ್ಲಿರುವ ವೆಂಕಯ್ಯ ನಾಯ್ಡು ಅವರು, ಸಂಸದ ಪಿ.ಸಿ. ಮೋಹನ್ ಅವರ ನಿವಾಸಕ್ಕೆ ತೆರಳಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.
Comments