ಇಲ್ಲೊಂದು ದೇವರಿಗೆ ಭಕ್ತರು ಹರಕೆ ರೂಪದಲ್ಲಿ ಡಿ, ವಿಸ್ಕಿ, ಜಿನ್ ನೈವೇದ್ಯ ನೀಡ್ತಾರೆ..!!

ಹೌದು. ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಹುಲಿಯೂರುದುರ್ಗ ಸಮೀಪದ ಒಡೇ ಭೈರವನಿಗೆ ಭಂಗಿ ಸೇವೆ ಹೆಸರಲ್ಲಿ ಮದ್ಯ ಕೊಡಿಸುತ್ತೇನೆ ಎಂದು ಹರಕೆ ಹೊತ್ತುಕೊಳ್ಳುತ್ತಾರಂತೆ ಇಲ್ಲಿನ ಭಕ್ತರು. ತಮ್ಮ ಹರಕೆ ಈಡೇರಿದ ಕೂಡಲೇ ಭಕ್ತರು ಭೈರವ ದೇವಾಲಯಕ್ಕೆ ಆಗಮಿಸಿ ಡಿ, ವಿಸ್ಕಿ, ಜಿನ್ ಸೇರಿದಂತೆ ವಿವಿಧ ಬ್ರಾಂಡ್‍ಗಳುಳ್ಳ ಎಣ್ಣೆಯನ್ನು ನೀಡಿ ಪೂಜೆ ಮಾಡಿ ಕೃತಜ್ಞರಾಗುತ್ತಾರೆ.
ಸಾಮಾನ್ಯವಾಗಿ ನಮಲ್ಲಿ ಭಕ್ತರು ತಮ್ಮ ಇಷ್ಟಗಳು ಈಡೇರಿದ ವೇಳೆಯಲ್ಲಿ ದೇವರಿಗೆ ಪ್ರಸಾದ, ಪೂಜೆ ಪುನಸ್ಕಾರ, ಬಲಿ ಪೂಜೆ, ಅಕ್ಕಿ ಸೇವೆ, ಸೇರಿದಂತೆ ಇನ್ನಿತ್ತರ ಹರಕೆಗಳನ್ನು ಅಂದುಕೊಳ್ಳುವುದು ಮಾಮೂಲಿ ಆದರೆ ಇಲ್ಲೊಂದು ದೇವರಿದೆ ಈ ದೇವರಿಗೆ ಭಕ್ತರು ಹರಕೆ ರೂಪದಲ್ಲಿ ತೀರಿಸುವುದನ್ನು ಕೇಳಿದರೆ ನಿಮಗೆ ಆಶ್ಚರ್ಯವಾಗುವುದುರು ಖಂಡಿತ. ಅಷ್ಟೆ ಅಲ್ಲ ಹೇಗೂ ಕೈನಲ್ಲಿ ಮದ್ಯವನ್ನು ಹಿಡಿದುಕೊಂಡು ಬಂದ ಭಕ್ತರು ಹಾಗೇ ತೀರ್ಥ ಸೇವನೆಯನ್ನು ಕೂಡ ಮಾಡಿಕೊಂಡು ಫುಲ್ ಚಿತ್ ಆಗಿ ಮನೆಗೆ ಹೋಗುತ್ತಾರೆ. ಭಕ್ತರು ತಂದ ಮದ್ಯವನ್ನು ಶೇಖರಣೆ ಮಾಡುವ ಸಲುವಾಗಿ ದೇವಾಲಯದ ಬಳಿಯಲ್ಲಿ ದೊಡ್ಡ ದೊಡ್ಡ ಡ್ರಮ್ ಇಡಲಾಗಿದ್ದು, ಇದೇ ಡ್ರಮ್ ಒಳಗೆ ಭಕ್ತರು ಮದ್ಯವನ್ನು ಹಾಕಿ ಸಾಮೂಹಿಕವಾಗಿ ಪ್ರಾರ್ಥನೆ ಮಾಡಿ ತಾವು ಸೇವಿಸುತ್ತಾರಂತೆ. ಇದಲ್ಲದೇ ಇನ್ನೊಂದು ಶಾಕಿಂಗ್ ಆಚರಣೆ ಕೂಡ ಇಲ್ಲಿ ನಡೆಯುತ್ತದೆ ಆದೇನಪ್ಪ ಅಂದ್ರೆ ಪುಟ್ಟ ಪುಟ್ಟ ಮಕ್ಕಳಿಗೂ ಮದ್ಯ ನೀಡುತ್ತಿರೋದು.
Comments