ನಟ ಕಾಶೀನಾಥ್ ಅವರ ಅಂತಿಮ ಸಂಸ್ಕಾರ ಚಾಮರಾಜಪೇಟೆಯಲ್ಲಿ ನೆರವೇರಲಿದೆ

ಹೃದಯಾಘಾತದಿಂದ ಇಹಲೋಕ ತ್ಯಜಿಸಿರುವ ಹಿರಿಯ ನಟ ಕಾಶೀನಾಥ್ ಅವರ ಅಂತಿಮ ಸಂಸ್ಕಾರ ಇಂದು ಸಂಜೆ ವೇಳೆಗೆ ಚಾಮರಾಜಪೇಟೆಯಲ್ಲಿ ನೆರವೇರಲಿದೆ ಅಂತ ಕುಟುಂಬ ಮೂಲಗಳು ತಿಳಿಸಿವೆ. ಇಂದು ಮಧ್ಯಾಹ್ನ ಒಂದೂವರೆ ಗಂಟೆಗೆ ಎಪಿಎಸ್ ಕಾಲೇಜು ಮೈದಾನದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಸಿದ್ಧ ಸಾರ್ವಜನಿಕರಿಗೆ ಅನುವು ಮಾಡಿಕೊಡಲಾಗಿದೆ.
ಸಾರ್ವಜನಿಕರ ದರ್ಶನದ ಮುಗಿದ ನಂತರ 4 ಗಂಟೆಗೆ ಮನೆಯಲ್ಲಿ ಅಂತಿಮ ವಿಧಿವಿಧಾನ ಹಿಂದು ಬ್ರಾಹ್ಮಣ ಸಂಪ್ರದಾಯದಂತೆ ನಡೆಯಲಿದೆ. ದುಬೈನಲ್ಲಿರುವ ಕಾಶೀನಾಥ್ ಅವರ ಪುತ್ರಿ ವರ್ಷಿಣಿ ಸಂಜೆ 5 ಗಂಟೆಗೆ ವಾಪಸಾಗಲಿದ್ದು, ಆರು ಗಂಟೆಗೆ ಚಾಮರಾಜಪೇಟೆಯಲ್ಲಿರುವ ರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
Comments