ಕಲುಷಿತ ಆಹಾರದಿಂದ ಅಸ್ವಸ್ಥಗೊಂಡ 30 ವಿದ್ಯಾರ್ಥಿಗಳು, ಆಸ್ಪತ್ರೆಗೆ ದಾಖಲು

ಕಲುಷಿತ ಆಹಾರ ಸೇವಿಸಿ 30 ವಿದ್ಯಾರ್ಥಿಗಳು ಅಸ್ವಸ್ಥರಾಗಿರುವ ಘಟನೆ ಮಹಾರಾಷ್ಟ್ರದ ಭೀವಂಡಿ ಪಟ್ಟಣದಲ್ಲಿ ನಡೆದಿದೆ. ಮಧ್ಯಾಹ್ನ ಮದರಸಾದಲ್ಲಿ ನಡೆದ ಕಾರ್ಯಕ್ರಮ ದಲ್ಲಿ ಸೀಮಿತ ಮಕ್ಕಳಿಗೆ ಆಹಾರವನ್ನು ನೀಡಲಾಯಿತು.
ಆಹಾರ ಸೇವಿಸಿದ 12 ರಿಂದ 15 ವರ್ಷಗಳ 30 ಬಾಲಕರು ವಾಂತಿ, ಬೇಧಿ, ಹೊಟ್ಟೆ ನೋವು ಮತ್ತು ತಲೆಸುತ್ತಿನಿಂದ ಬಳಲಿದರು. ತಕ್ಷಣ ಅವರನ್ನು ಸರ್ಕಾರಿ ಒಡೆತನದ ಐಜಿಎಂ ಆಸ್ಪತ್ರೆಗೆ ಸೇರಿಸಲಾಯಿತು ಎಂದು ಭೀವಂಡಿ ತಹಶೀಲ್ದಾರ್ ಶಶಿಕಾಂತ್ ಗಾಯಕ್ವಾಡ್ ತಿಳಿಸಿದ್ದಾರೆ. ಆದರೆ ಮಕ್ಕಳ ಸ್ಥಿತಿ ಮತ್ತಷ್ಟು ಹದಗೆಟ್ಟ ಕಾರಣ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮುಂಬೈನ ನಾಯರ್ ಆಸ್ಪತ್ರೆಗೆ ವರ್ಗಾಯಿಸಲಾಯಿತು. ಅದೃಷ್ಟ ವಶ ಮಕ್ಕಳು ಪ್ರಾಣಾಪಾಯದಿಂದ ಹೊರಬಂದಿದ್ದಾರೆ.
ಈ ಘಟನೆಯ ಕುರಿತು ತನಿಖೆ ಮಾಡಲು ಆದೇಶಿಸಲಾಗಿದೆ.
Comments