ಏಪ್ರಿಲ್ 1 ರಿಂದ ಓಮ್ನಿ ಆಂಬುಲೆನ್ಸ್ ಗಳ ನಿಷೇಧಕ್ಕೆ ಸಾರಿಗೆ ಇಲಾಖೆ ಸಿದ್ಧತೆ.!

ಏಪ್ರಿಲ್ 1ರ ಬಳಿಕ ಓಮ್ನಿ ವಾಹನಗಳನ್ನು ಆಂಬುಲೆನ್ಸ್ಗಳಾಗಿ ನೋಂದಣಿ ಮಾಡುವ ಹಾಗಿಲ್ಲ. ಜತೆಗೆ ಈಗಾಗಲೇ ನೋಂದಣಿಯಾಗಿರುವ ಓಮ್ನಿ ವಾಹನಗಳ ಅನುಮತಿಯನ್ನೂ ಕೂಡ ಹಿಂಪಡೆಯಲಾಗುತ್ತದೆ ಎಂದು ತಿಳಿದು ಬಂದಿದೆ.
ವಾಹನಗಳಲ್ಲಿ ಆಂಬುಲೆನ್ಸ್ ನಲ್ಲಿ ಇರಬೇಕಾದ ಸೌಲಭ್ಯಗಳು ಇಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಅಪಘಾತ ಸಂಭವಿಸಿದರೆ ರೋಗಿ ಸೇರಿದಂತೆ ಜೊತೆಗಿರುವವರ ಪ್ರಾಣಕ್ಕೂ ಅಪಾಯವಾಗುವ ಸಾಧ್ಯತೆಗಳಿವೆ. ಹಾಗಾಗಿ ಈ ಮಾದರಿಯ ಆಂಬುಲೆನ್ಸ್ ಗಳನ್ನು ತಕ್ಷಣದಿಂದ ನಿರ್ಬಂಧಿಸುವಂತೆ ಆರೋಗ್ಯ ಇಲಾಖೆಯೂ ಕಳೆದ ವರ್ಷ ಸಾರಿಗೆ ಇಲಾಖೆಗೆ ಮನವಿ ಮಾಡಿತ್ತು. ಸಾರಿಗೆ ಓಮ್ನಿ ಆಂಬುಲೆನ್ಸ್ ಗಳನ್ನು ನಿರ್ಬಂಧಿಸಿತ್ತು. ಏಕಾಏಕಿ ನಿಷೇಧಿಸಿದ್ದಕ್ಕೆ ತಡೆ ನೀಡಿದ್ದ ಹೈಕೋರ್ಟ್, 2018 ರ ಏ.1 ಬಳಿಕ ನಿಷೇಧಿಸುವಂತೆ ಸೂಚಿಸಿತ್ತು.ಈ ಹಿನ್ನೆಲೆಯಲ್ಲಿ ಏ.೧ರ ಬಳಿಕ ಓಮ್ನಿ ಆಂಬುಲೆನ್ಸ್ ನಿಷೇಧಿಸಲು ಸಾರಿಗೆ ಇಲಾಖೆ ನಿರ್ಧರಿಸಿದೆ.
Comments