10 ರೂಪಾಯಿ ನಾಣ್ಯದ ಬಗ್ಗೆ ಮಹತ್ವದ ಆದೇಶ ಹೊರಡಿಸಿರುವ ಆರ್ ಬಿ ಐ
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 10 ರೂಪಾಯಿ ನಾಣ್ಯದ ಬಗ್ಗೆ ಮಹತ್ವದ ಆದೇಶವೊಂದನ್ನು ಜಾರಿಗೊಳಿಸಿದೆ ಯಾವುದೇ ವ್ಯಾಪಾರಿಯಿರಲಿ ಇಲ್ಲ ಜನಸಾಮಾನ್ಯನಿರಲಿ 10 ರೂಪಾಯಿ ನಾಣ್ಯಗಳ ವಹಿವಾಟಿಗೆ ಹೆದರಬೇಕಾಗಿಲ್ಲ ಎಂದು ಆರ್ ಬಿ ಐ ಸೂಚನೆ ನೀಡಿದೆ.
ಚಲಾವಣೆಯಲ್ಲಿರುವ ಎಲ್ಲ 10 ರೂಪಾಯಿ ನಾಣ್ಯಗಳು ಅಸಲಿಯಾಗಿದ್ದು, ಇದನ್ನು ಜಮಾ ಮಾಡಲು ಯಾವುದೇ ಬ್ಯಾಂಕ್ ನಿರಾಕರಿಸುವುದಿಲ್ಲವೆಂದು ಆರ್ ಬಿ ಐ ತಿಳಿಸಿದೆ. ಪ್ರತಿಯೊಂದು ನಾಣ್ಯವನ್ನೂ ಕೇಂದ್ರ ಸರ್ಕಾರದಡಿಯಲ್ಲಿ ಮುದ್ರಿಸಲಾಗುತ್ತದೆ. ಆರ್ಥಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ವಿಷ್ಯಗಳನ್ನು ಗಮನದಲ್ಲಿಟ್ಟುಕೊಂಡು ನಾಣ್ಯಗಳನ್ನು ಮುದ್ರಿಸಲಾಗುವುದ್ರಿಂದ ಮಾರುಕಟ್ಟೆಯಲ್ಲಿ ಬೇರೆ ಬೇರೆ ಗಾತ್ರದ ಹಾಗೂ ರೂಪದ ನಾಣ್ಯಗಳಿವೆ. ಈವರೆಗೆ 14 ವಿಧದ 10 ರೂಪಾಯಿ ನಾಣ್ಯವನ್ನು ಮಾರುಕಟ್ಟೆಗೆ ಬಿಟ್ಟಿದೆ ಎಂದು ಆರ್ ಬಿ ಐ ಹೇಳಿದೆ. ಅನೇಕ ಪ್ರದೇಶಗಳಲ್ಲಿ 10 ರೂಪಾಯಿ ನಾಣ್ಯವನ್ನು ಅನುಮಾನದಿಂದ ನೋಡಲಾಗ್ತಿದೆ. ಮಾರುಕಟ್ಟೆಯಲ್ಲಿ ವ್ಯಾಪಾರಿಗಳಿಂದ ಹಿಡಿದು ಜನಸಾಮಾನ್ಯರವರೆಗೆ ಯಾರೂ 10 ರೂಪಾಯಿ ನಾಣ್ಯ ಪಡೆಯುತ್ತಿಲ್ಲ.
Comments