ಇ-ಕಾಮರ್ಸ್ ಕಂಪನಿ ಫ್ಲಿಪ್ಕಾರ್ಟ್ ಮೆಗಾ ಸೇಲ್ ಶುರುಮಾಡ್ತಿದೆ..!!

ಗಣರಾಜ್ಯೋತ್ಸವ ಹತ್ತಿರ ಬರ್ತಿದೆ. ಇ-ಕಾಮರ್ಸ್ ಕಂಪನಿಗಳು ಜನರ ಅಗತ್ಯತೆಯನ್ನು ಗಮನದಲ್ಲಿಟ್ಟುಕೊಂಡು ಲಾಭ ಪಡೆಯಲು ಮುಂದಾಗಿವೆ. ಇ-ಕಾಮರ್ಸ್ ಕಂಪನಿ ಫ್ಲಿಪ್ಕಾರ್ಟ್ ಮೆಗಾ ಸೇಲ್ ಶುರುಮಾಡ್ತಿದೆ. ಜನವರಿ 21ರಿಂದ 23ರವರೆಗೆ ಈ ಮೆಗಾ ಸೇಲ್ ನಡೆಯಲಿದೆ.
ಅಮೆಜಾನ್ ಗೆ ಟಕ್ಕರ್ ನೀಡಲು ಫ್ಲಿಪ್ಕಾರ್ಟ್ ಈ ಸೇಲ್ ನಲ್ಲಿ ಭರ್ಜರಿ ರಿಯಾಯಿತಿ ನೀಡ್ತಿದೆ. ಕ್ಯಾಶ್ಬ್ಯಾಕ್ ಆಪರ್ ಕೂಡ ಇದೆ. ಜನವರಿ 21ರಿಂದ 23ರವರೆಗೆ ನಡೆಯುವ ಈ ಸೇಲ್ ನಲ್ಲಿ ಸಿಟಿ ಬ್ಯಾಂಕ್ ಕ್ರೆಡಿಟ್ ಹಾಗೂ ಡೆಬಿಟ್ ಕಾರ್ಡ್ ಬಳಕೆದಾರರಿಗೆ ಶೇಕಡಾ 10ರಷ್ಟು ಕ್ಯಾಶ್ಬ್ಯಾಕ್ ಸಿಗಲಿದೆ. ಈ ಸೇಲ್ ನಲ್ಲಿ ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್ 7 ಎಡ್ಜ್ 35,900 ರೂಪಾಯಿಗೆ ಸಿಗಲಿದೆ. ಇದಲ್ಲದೆ ಗೂಗಲ್ ನ Google Pixel 2 XL ಫೋನನ್ನು ಹೆಚ್ ಡಿಎಫ್ ಸಿ ಕ್ರೆಡಿಟ್ ಕಾರ್ಡ್ ಮೂಲಕ ಖರೀದಿ ಮಾಡಿದ್ರೆ 10,000 ರೂಪಾಯಿ ಕ್ಯಾಶ್ಬ್ಯಾಕ್ ಸಿಗಲಿದೆ. ಅಂದ್ರೆ ಫೋನ್ 48,999 ರೂಪಾಯಿಗೆ ಲಭ್ಯವಾಗಲಿದೆ. ಈ ಸೇಲ್ ನಲ್ಲಿ Xiaomi Mi Mix 29,999 ರೂಪಾಯಿಗೆ ಹಾಗೂ Vivo V7 Plus 16,990 ರೂಪಾಯಿಗೆ ಸಿಗಲಿದೆ. ಮೊಬೈಲ್ ಜೊತೆಗೆ ಲ್ಯಾಪ್ ಟಾಪ್ ಸೇರಿದಂತೆ ಅನೇಕ ಎಲೆಕ್ಟ್ರಾನಿಕ್ ವಸ್ತುಗಳ ಮೇಲೆ ಶೇಕಡಾ 80 ರಷ್ಟರವರೆಗೆ ರಿಯಾಯಿತಿ ನೀಡುವುದಾಗಿ ಫ್ಲಿಪ್ಕಾರ್ಟ್ ಹೇಳಿದೆ.
Comments