ರಿಲಯನ್ಸ್ ಜಿಯೋ ಗ್ರಾಹಕರಿಗೆ ಬಂಪರ್ ಆಫರ್

ಜಿಯೋ ವೆಬ್ ಸೈಟ್ ನಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, 398 ರೂ. ಮತ್ತು ಅದಕ್ಕಿಂತ ಹೆಚ್ಚಿನ ಮೊತ್ತದ ರೀಚಾರ್ಜ್ ಗಳಿಗೆ 100 ಪರ್ಸೆಂಟ್ ಕ್ಯಾಶ್ ಬ್ಯಾಕ್ ನೀಡಲಾಗ್ತಿದೆ. 50 ರೂ. ಮೌಲ್ಯದ 8 ವೋಚರ್ ಗಳಲ್ಲಿ 400 ರೂ. ಕ್ಯಾಶ್ ಬ್ಯಾಕ್ ಪಡೆದುಕೊಳ್ಳಬಹುದಾಗಿದೆ.
ಮುಖೇಶ್ ಅಂಬಾನಿಯವರ ರಿಲಯನ್ಸ್ ಜಿಯೋ ಮತ್ತೊಂದು ಕ್ಯಾಶ್ ಬ್ಯಾಕ್ ಆಫರ್ ಘೋಷಿಸಿದೆ. ಅದರಂತೆ ಶೇ. 100 ರಷ್ಟು ಕ್ಯಾಶ್ ಬ್ಯಾಕ್ ಆಫರ್ ನೀಡಲಾಗಿದೆ. ನೀವು ಅಮೆಜಾನ್ ಪೇ, ಮೊಬಿಕ್ವಿಕ್, ಪೇಟಿಎಂ ಮೊದಲಾದವುಗಳ ಮೂಲಕ ರೀಚಾರ್ಜ್ ಮಾಡಿದಲ್ಲಿ 300 ರೂ. ವರೆಗೆ ಕ್ಯಾಶ್ ಬ್ಯಾಕ್ ಪಡೆಯಬಹುದಾಗಿದೆ. ಜಿಯೋ ಕ್ಯಾಶ್ ಬ್ಯಾಕ್ ಆಫರ್ ನೀಡ್ತಿರುವುದು ಇದೇ ಮೊದಲೇನಲ್ಲ. ಹಿಂದೆ 399 ರೂ. ರೀಚಾರ್ಜ್ ಗೆ 3,300 ರೂ.ವರೆಗೆ ಕ್ಯಾಶ್ ಬ್ಯಾಕ್ ಆಫರ್ ನೀಡಲಾಗಿತ್ತು.
Comments