ಕಾವೇರಿ ವಿವಾದ: ಕರ್ನಾಟಕ ಮೇಲೆ ಒತ್ತಡ ಹೇರಲು ತಮಿಳುನಾಡು ಸರ್ಕಾರ ಯತ್ನ
ಕಾವೇರಿ ನದಿ ನೀರಿನಲ್ಲಿ 2017-18ನೇ ಸಾಲಿನ ವರ್ಷದಲ್ಲಿ ತಮಿಳುನಾಡು ರಾಜ್ಯಕ್ಕೆ ಬರಬೇಕಿದ್ದಷ್ಟು ನೀರು ಬಂದಿಲ್ಲ. ಹೀಗಾಗಿ 15 ಟಿಎಂಸಿ ನೀರನ್ನು ಕೂಡಲೇ ರಾಜ್ಯಕ್ಕೆ ಹರಿಸಬೇಕೆಂದು ಕೆಲ ದಿನಗಳ ಹಿಂದಷ್ಟೇ ತಮಿಳುನಾಡು ಮುಖ್ಯಮಂತ್ರಿ ಪಳನಿಸ್ವಾಮಿ ಅವರು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದರು.
ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಹತ್ತಿರಬರುತ್ತಿದ್ದು, ಪ್ರಸ್ತುತದ ಪರಿಸ್ಥಿತಿಯಲ್ಲಿ ಅವಕಾಶನ್ನು ತೆಗೆದುಕೊಳ್ಳಲು ಇಚ್ಛಿಸದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ತಮಿಳುನಾಡು ರಾಜ್ಯದ ಆಗ್ರಹಗಳಿಗೆ ಕಿವಿಗೊಡದೆ, ಬೇಸಿಗೆ ಕೃಷಿಗಾಗಿ ತಿಂಗಳಲ್ಲಿ 15 ದಿನಗಳ ಕಾಲ ನೀರು ಒದಗಿಸಲು ನಿರ್ಧರಿಸಿದ್ದಾರೆಂದು ಮೂಲಗಳು ತಿಳಿಸಿವೆ. ಈ ಬಾರಿ ತಮಿಳುನಾಡು ರಾಜ್ಯದಲ್ಲಿ ಉತ್ತಮವಾಗಿ ಮಳೆಯಾಗಿದ್ದೆ. ಈಗಾಗಲೇ ತಮಿಳುನಾಡು ರಾಜ್ಯದ ಅಗ್ರಹದಂತೆಯೇ ರಾಜ್ಯ ಸರ್ಕಾರ 192 ಟಿಎಂಸಿ ಪೈಕಿ 117 ಟಿಎಂಸಿ ನೀರನ್ನು ಹರಿಸಿದೆ.
ಕೃಷಿಯೇತರ ಚಟುವಟಿಕೆಗಳಿಗೆ ನೀರನ್ನು ಬಿಡಲು ಸರ್ಕಾರ ಈಗಾಗಲೇ ನಿರ್ಧಾರ ಕೈಗೊಂಡಿದ್ದು, ನಿರ್ಧಾರವನ್ನು ಸಮರ್ಥಿಸಿಕೊಳ್ಳಲು ಸಿದ್ಧವಾಗಿದೆ. ಕಳೆದ ಎರಡು ವರ್ಷಗಳಿಂದಲೂ ರೈತರ ಕೃಷಿಗೆ ಸರ್ಕಾರ ನೀರನ್ನು ಒದಗಿಸಿಲ್ಲ. ಇದರ ಪರಿಣಾಮ ಬರಗಾಲದಿಂದಾಗಿ ಹಲವು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರಸ್ತುತ ಕೆಆರ್'ಎಸ್ ನಲ್ಲಿ ಒಟ್ಟು 102 ಅಡಿಯಷ್ಟು ನೀರು ಮಾತ್ರ ಇದೆ. ಡ್ಯಾಂನಲ್ಲಿ 4.4 ಡೆಡ್ ಸ್ಟೋರೇಜ್ ವಾಟರ್ ಸೇರಿ ಒಟ್ಟು 24 ಟಿಎಂಸಿಯಷ್ಟಿ ನೀರಿದೆ. ಇದರಲ್ಲಿ ಅಧಿಕಾರಿಗಳು 16 ಟಿಎಂಸಿ ಕಷಿಗೆ, 3.6 ಟಿಎಂಸಿ ಮೈಸೂರು, ಮಂಡ್ಯ ಹಾಗೂ ಬೆಂಗಳೂರು ನಗರಕ್ಕೆ ಕುಡಿಯುವ ನೀರು ಎಂದು ನಿರ್ಧರಿಸಿದ್ದಾರೆ.
Comments