ಪವನ್ ಹ್ಯಾನ್ಸ್ ಹೆಲಿಕಾಪ್ಟರ್ ನಾಪತ್ತೆ, ಐವರು ಪ್ರಯಾಣಿಕರಿಗೆ ಹುಡುಕಾಟ

ಪವನ್ ಹ್ಯಾನ್ಸ್ ಹೆಲಿಕಾಪ್ಟರ್ ಜುಹು ವಿಮಾನ ನಿಲ್ದಾಣದಿಂದ ಟೇಕ್ ಆಫ್ ಮಾಡಿದ ಸ್ವಲ್ಪ ಹೊತ್ತಿನಲ್ಲಿಯೇ ಕಣ್ಮರೆಯಾಗಿದೆ. ಹೆಲಿಕಾಪ್ಟರ್ ನಲ್ಲಿ ತೈಲ ಮತ್ತು ನೈಸರ್ಗಿಕ ಅನಿಲ ನಿಗಮದ ಅಧಿಕಾರಿಗಳು(ಒಎನ್ ಜಿಸಿ) ಸೇರಿದಂತೆ ಕನಿಷ್ಠ 5 ಮಂದಿ ಪ್ರಯಾಣಿಕರಿದ್ದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಡಾಫಿನ್ ಚಾಪರ್, ವಿಟಿ ಪಿಡಬ್ಲ್ಯುಎ ಇಂದು ಬೆಳಗ್ಗೆ 10.20ಕ್ಕೆ ಜುಹು ವಿಮಾನ ನಿಲ್ದಾಣದಲ್ಲಿ ಟೇಕ್ ಆಫ್ ಆಯಿತು. ನಂತರ ಕೇವಲ 15 ನಿಮಿಷಗಳಲ್ಲಿಯೇ ಮುಂಬೈಯ ಎಟಿಸಿ ಮತ್ತು ತೈಲ ಮತ್ತು ನೈಸರ್ಗಿಕ ಅನಿಲ ನಿಗಮಗಳಿಂದ ಸಂಪರ್ಕ ಕಳೆದುಕೊಂಡಿತು. ಮುಂಬೈ ತೀರಪ್ರದೇಶದಿಂದ ಒಎನ್ ಜಿಸಿ ಮುಂಬೈ ಹೈ ತೈಲ ನಿಕ್ಷೇಪ ಕೇಂದ್ರಕ್ಕೆ ಹೋಗುವ ದಾರಿಯಲ್ಲಿ 55 ಕಿಲೋ ಮೀಟರ್ ದೂರದಲ್ಲಿ 175 ಕಿಲೋ ಮೀಟರ್ ವಾಯುವ್ಯ ದಿಕ್ಕಿನಲ್ಲಿ ಹಾರಾಟ ಮಾಡುತ್ತಿದೆ ಎಂದು ಭಾವಿಸಲಾಗಿತ್ತು. ಕಣ್ಮರೆಯಾದ ನಂತರ ಭಾರತೀಯ ತೀರ ಪಡೆ ಹಡಗನ್ನು ಮತ್ತು ವಿಮಾನದ ದಿಕ್ಕನ್ನು ಬದಲಾಯಿಸಿ ಹುಡುಕಾಟ ಮತ್ತು ರಕ್ಷಣಾ ಕಾರ್ಯಚರಣೆಗೆ ಕಳುಹಿಸಿತು ಎಂದು ವಕ್ತಾರರು ತಿಳಿಸಿದ್ದಾರೆ. ಕಾಣೆಯಾಗಿರುವ ಹೆಲಿಕಾಪ್ಟರ್ ನ್ನು ಶೋಧ ನಡೆಸಲು ಮತ್ತೊಂದು ವಿಮಾನವನ್ನು ಕಳುಹಿಸಲಾಗಿದೆ
Comments