ಮಾಸ್ತಿಗುಡಿ ಚಿತ್ರೀಕರಣದ ಅನಿಲ್, ಉದಯ್ ಸಾವಿನ ಪ್ರಕರಣಕ್ಕೆ ಹೊಸ ವಿಚಾರಣೆಗೆ ಹೈಕೋರ್ಟ್ ಸೂಚನೆ

13 Jan 2018 12:31 PM | General
313 Report

ಮಾಸ್ತಿಗುಡಿ ಚಿತ್ರದ ಚಿತ್ರೀಕರಣದ ವೇಳೆ ಖಳ ನಟರ ಸಾವಿನ ಪ್ರಕರಣ ಸಂಬಂಧ ಸಲ್ಲಿಕೆಯಾಗಿರುವ ಆರೋಪಪಟ್ಟಿಯನ್ನು ರದ್ದುಗೊಳಿಸಿರುವ ಹೈಕೋರ್ಟ್, ಹೊಸದಾಗಿ ವಿಚಾರಣೆ ನಡೆಸುವಂತೆ ಕೆಳ ನ್ಯಾಯಾಲಯಕ್ಕೆ ನಿರ್ದೇಶನ ನೀಡಿದೆ. 

ವಿಚಾರಣೆ ರದ್ದು ಕೋರಿ ನಿರ್ದೇಶಕ ನಾಗಶೇಖರ್, ನಿರ್ಮಾಪಕ ಸುಂದರ್ ಗೌಡ, ಸಾಹಸ ನಿರ್ದೇಶಕ ರವಿವರ್ಮ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಐಪಿಸಿ 304 ಅನ್ವಯ ಈ ಘಟನೆ ಉದ್ದೇಶಪೂರಕ ನರಹತ್ಯೆಯಾಗಿದೆ. ಚಿತ್ರತಂಡದ ಅಜಾಗರೂಕತೆಯಿಂದ ಇಬ್ಬರು ನಟರು ಸಾವನ್ನಪ್ಪಿದ್ದಾರೆ ಎಂದು ಅಭಿಪ್ರಾಯಪಟ್ಟಿತು. ಚಿತ್ರತಂಡದ ವಿರುದ್ಧ ಐಪಿಸಿ 304 ಅಡಿ ಸಲ್ಲಿಸಿದ್ದ ಆರೋಪಪಟ್ಟಿ ರದ್ದುಗೊಳಿಸಲು ಸಮ್ಮತಿ ಸೂಚಿಸಿದ ನ್ಯಾಯಪೀಠ, ಎಫ್ಐಆರ್ ರದ್ದುಗೊಳಿಸಲು ನಿರಾಕರಿಸಿತು. ಪ್ರಕರಣವನ್ನು‌ ಹೊಸದಾಗಿ ವಿಚಾರಣೆ ನಡೆಸುವಂತೆ ರಾಮನಗರ ಜಿಲ್ಲಾ ಸೆಷನ್ಸ್ ಕೋರ್ಟ್‌ಗೆ ನಿರ್ದೇಶನ ನೀಡಿ ಅರ್ಜಿ ಇತ್ಯರ್ಥಪಡಿಸಿತು.

Edited By

Shruthi G

Reported By

Madhu shree

Comments