ಧೋನಿ ಕ್ಯೂಟ್ ಮಗಳಿಗೆ ಸ್ವೀಟ್ ಅಪ್ಪ
ಟೀಂ ಇಂಡಿಯಾ ಮಾಜಿ ನಾಯಕ ಎಂ.ಎಸ್.ಧೋನಿ ಸದ್ಯ ಕುಟುಂಬಸ್ಥರ ಜೊತೆ ಕಾಲ ಕಳೆಯುತ್ತಿದ್ದಾರೆ. ಸಿಕ್ಕ ಸಮಯದಲ್ಲಿ ಮಗಳ ಜೊತೆ ಎಂಜಾಯ್ ಮಾಡುವ ಧೋನಿ ಕ್ಯೂಟ್ ಮಗಳಿಗೆ ಸ್ವೀಟ್ ಅಪ್ಪ. ಧೋನಿ ಮಗಳು ಜೀವಾ ಜೊತೆಗಿರುವ ಫೋಟೋವೊಂದನ್ನು ಸಾಮಾಜಿಕ ಜಾಲತಾಣಕ್ಕೆ ಹಾಕಿದ್ದಾರೆ. ಜೀವಾ ಇನ್ಸ್ಟ್ರಾಗ್ರಾಮ್ ಅಕೌಂಟ್ ಗೆ ಫೋಟೋ ಹಾಕಿರುವ ಧೋನಿ, ಮಗಳ ಮೊದಲ ವರ್ಷದ ಶಾಲಾ ವಾರ್ಷಿಕೋತ್ಸವದ ನಂತ್ರ ಎಂದು ಶೀರ್ಷಿಕೆ ಹಾಕಿದ್ದಾರೆ. ಬ್ಲಾಕ್ ಜಾಕೆಟ್ ನಲ್ಲಿ ಧೋನಿ ಮಿಂಚುತ್ತಿದ್ದರೆ ಜೀವಾ ಕೆಂಪು ಡ್ರೆಸ್ ತೊಟ್ಟು ಅಪ್ಪನ ಜೊತೆ ಕುಳಿತಿದ್ದಾಳೆ.
ಜೀವಾ ಶಾಲೆ ವಾರ್ಷಿಕೋತ್ಸವದಲ್ಲಿ ಪಾಲ್ಗೊಂಡಿದ್ದ ಧೋನಿ ಅಲ್ಲಿನ ಸುಂದರ ಕ್ಷಣಗಳು ಹಾಗೂ ವಿಡಿಯೋವನ್ನು ಸಾಮಾಜಿಕ ಜಾಲತಾಣಕ್ಕೆ ಹಾಕಿದ್ದಾರೆ. ಧೋನಿ ಪತ್ನಿ ಸಾಕ್ಷಿ ಕೂಡ ಜೀವಾ ಡಾನ್ಸ್ ಮಾಡ್ತಿದ್ದ ಫೋಟೋವನ್ನು ಇನ್ಸ್ಟ್ರಾಗ್ರಾಮ್ ಗೆ ಹಾಕಿದ್ದಾರೆ. ಟೆಸ್ಟ್ ಪಂದ್ಯಕ್ಕೆ ವಿದಾಯ ಹೇಳಿರುವ ಧೋನಿ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ತೆರಳಿಲ್ಲ. ಈ ಬಿಡುವಿನ ಸಮಯವನ್ನು ಮಗಳ ಜೊತೆ ಕಳೆಯುತ್ತಿರುವ ಧೋನಿ ಮಗಳ ಶಾಲಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಗಳ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರಗು ನೀಡಿದ್ರು.
Comments