ವಾಟ್ಸಾಪ್ ಬಳಕೆದಾರರು ಗಮನಿಸಲೇಬೇಕಾದ ಸುದ್ದಿ.!
ವಾಟ್ಸಾಪ್ ಮತ್ತೊಂದು ಹೊಸ ಫೀಚರ್ ಅನ್ನು ಪರಿಚಯಿಸಿದೆ. ವಾಟ್ಸಾಪ್ ಗ್ರೂಪ್ ಗಳಲ್ಲಿ ಒಬ್ಬ ಅಡ್ಮಿನ್ ಉಳಿದ ಅಡ್ಮಿನಿಸ್ಟ್ರೇಟರ್ ಗಳನ್ನು ಡಿಮೋಟ್ ಮಾಡಲು ಈಗ ಅವಕಾಶವಿದೆ. ಇದಕ್ಕಾಗಿ ಅವರನ್ನು ಗ್ರೂಪ್ ನಿಂದ ಡಿಲೀಟ್ ಅಥವಾ ರಿಮೂವ್ ಮಾಡಬೇಕಾಗಿಲ್ಲ.
ಕೇವಲ ಅಡ್ಮಿನ್ ಅನ್ನೋ ಸ್ಟೇಟಸ್ ಅನ್ನು ತೆಗೆದು ಹಾಕಿ ಡಿಮೋಟ್ ಮಾಡಬಹುದು. ವಾಟ್ಸಾಪ್ ನ ಗ್ರೂಪ್ ಇನ್ಫೋ ಸೆಕ್ಷನ್ ನಲ್ಲಿ ಡಿಸ್ಮಿಸ್ ಆಯಸ್ ಅಡ್ಮಿನ್ ಅನ್ನೋ ಆಪ್ಷನ್ ಕೊಡಲಾಗಿದೆ. ಅದನ್ನು ಕ್ಲಿಕ್ ಮಾಡಿ ನೀವು ಅಡ್ಮಿನ್ ಸ್ಟೇಟಸ್ ಅನ್ನು ಡಿಮೋಟ್ ಮಾಡಬಹುದು. iOS ಮತ್ತು ಆಯಂಡ್ರಾಯ್ಡ್ ನಲ್ಲಿ ಈ ಆಪ್ಷನ್ ಲಭ್ಯವಾಗಲಿದೆ. ಸದ್ಯ iOSನಲ್ಲಿ ಇದನ್ನು ಟೆಸ್ಟ್ ಮಾಡಲಾಗ್ತಿದೆ. ಫೇಸ್ಬುಕ್ ಒಡೆತನದ ವಾಟ್ಸಾಪ್, ಗ್ರೂಪ್ ಅಡ್ಮಿನ್ ಗಳಿಗೆ ಹೆಚ್ಚು ಪವರ್ ನೀಡಿದೆ. ಗ್ರೂಪ್ ಸದಸ್ಯರು ಟೆಕ್ಸ್ಟ್ ಮೆಸೇಜ್, ಫೋಟೋ, ವಿಡಿಯೋ, GIFಗಳನ್ನು ಕಳಿಸದಂತೆ ನಿರ್ಬಂಧಿಸಬಹುದು.
Comments