ಶಬರಿ ಮಲೈನಲ್ಲಿ ಸಜೀವ ಬಾಂಬ್ ಪತ್ತೆ

12 Jan 2018 11:07 AM | General
228 Report

ಶಬರಿಮಲೆಗೆ ಹೋಗುವ ಮಾರ್ಗ ಮಧ್ಯೆ ಪಂಪಾನದಿ ಬಳಿ 450 ಸಜೀವ ಗುಂಡುಗಳು ಪತ್ತೆಯಾಗಿದ್ದು ಆತಂಕ ಮೂಡಿಸಿದೆ. ಕೇರಳದ ಕುಟ್ಟಿಪುರಂ ಸೇತುವೆ ಕೆಳಗೆ 450 ಸಜೀವ ಬುಲೆಟ್ ಗಳು, ಕಾಟ್ರಿಜ್ ಪತ್ತೆಯಾಗಿದೆ. ಸಂಕ್ರಾಂತಿ ಸಮಯದಲ್ಲಿ ಶಬರಿಮಲೆಗೆ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ.

ಇದನ್ನೇ ಟಾರ್ಗೆಟ್ ಮಾಡಿ ದುಷ್ಕರ್ಮಿಗಳು ಸ್ಫೋಟಕ್ಕೆ ಸಂಚು ರೂಪಿಸಿದ್ದಾರೆ. ವಿಶೇಷ ತನಿಖಾ ತಂಡ ಮಿಂಚಿನ ಕಾರ್ಯಾಚರಣೆ ನಡೆಸಿ ದುಷ್ಕರ್ಮಿಗಳು ರೂಪಿಸಿದ್ದ ಸಂಚನ್ನು ವಿಫಲಗೊಳಿಸಿದ್ದಾರೆ. ಬ್ರಿಡ್ಜ್ ಕೆಳಗೆ ಸ್ಪೋಟಕಗಳನ್ನು ಇಟ್ಟಿದ್ಯಾರು ಎಂಬುದರ ಬಗ್ಗೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

Edited By

Shruthi G

Reported By

Madhu shree

Comments