ಇಸ್ರೋದ 100ನೇ ಉಪಗ್ರಹ ಉಡಾವಣೆಗೆ ಕ್ಷಣಗಣನೆ ಆರಂಭ

11 Jan 2018 5:35 PM | General
227 Report

ಅನೇಕ ವಿಶ್ವ ವಿಕ್ರಮಗಳ ಹೆಗ್ಗಳಿಕೆಗೆ ಪಾತ್ರವಾಗಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ-ಇಸ್ರೋ ಉಪಗ್ರಹ ಉಡಾವಣೆಯಲ್ಲಿ ಶತಕದ ಮಹತ್ಸಾಧನೆಗೆ ಸಜ್ಜಾಗಿದೆ. ಆಂಧ್ರಪ್ರದೇಶದ ಶ್ರೀಹರಿಕೋಟಾದ (ಚೆನ್ನೈನಿಂದ 110 ಕಿ.ಮೀ.) ಬಾಹ್ಯಾಕಾಶ ಕೇಂದ್ರದಿಂದ ನಾಳೆ ಒಂದೇ ಬಾರಿಗೆ 30 ಉಪಗ್ರಹಗಳು ನಭಕ್ಕೆ ಚಿಮ್ಮಲ್ಲಿದ್ದು, ಇಸ್ರೋದ 100ನೇ ಉಡಾವಣೆಗೆ ಇಂದಿನಿಂದ 28 ಗಂಟೆಗಳ ಕ್ಷಣಗಣನೆ ಆರಂಭವಾಗಿದೆ.

ಇದು ಪಿಎಸ್‍ಎಲ್‍ವಿ ಶ್ರೇಣಿಯ 42ನೇ ಯೋಜನೆ ಎಂಬ ಹೆಗ್ಗಳಿಕೆಯೂ ಇದೆ. ಇಸ್ರೋದ ಅತ್ಯಂತ ವಿಶ್ವಾಸಾರ್ಹ ಪಿಎಸ್‍ಎಲ್‍ವಿ-ಸಿ40 ಗಗನನೌಕೆಯು ವಾತಾವರಣ ವೀಕ್ಷಣೆಯ ಕಾರ್ಟೊಸ್ಯಾಟ್-2 ಸರಣಿಯ ಉಪಗ್ರಹ ಮತ್ತು 30 ಸಹ ಉಪಗ್ರಹಗಳನ್ನು(ಒಟ್ಟು 613 ಕೆಜಿ) ನಾಳೆ ಬೆಳಗ್ಗೆ 9.30ಕ್ಕೆ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ ಮಾಡಲಾಗುತ್ತದೆ. ಈ ಶತಕದ ಸಾಧನೆಗೆ ಇಸ್ರೋ ಪರಿಪೂರ್ಣ ರೀತಿಯಲ್ಲಿ ಸಜ್ಜಾಗಿದೆ

Edited By

Shruthi G

Reported By

Madhu shree

Comments