ಕ್ಯಾಬ್ ನಲ್ಲಿ ಸಂಚಾರಿಸುವವರ ಜೇಬಿಗೆ ಇನ್ಮೇಲೆ ಕತ್ತರಿ ಬೀಳಲಿದೆ

ಯಾಕಂದ್ರೆ ಓಲಾ, ಉಬರ್ ಸೇರಿದಂತೆ ಎಲ್ಲಾ ಕ್ಯಾಬ್ ಕಂಪನಿಗಳಿಗೆ ಕರ್ನಾಟಕ ಸರ್ಕಾರ ಹೊಸ ಶುಲ್ಕ ನಿಯಮವನ್ನು ಜಾರಿಗೆ ತಂದಿದೆ.ವಾಹನಗಳ ಖರೀದಿ ವೆಚ್ಚದ ಆಧಾರದ ಮೇಲೆ ಕನಿಷ್ಠ ಮತ್ತು ಗರಿಷ್ಠ ಶುಲ್ಕವನ್ನು ಕ್ಯಾಬ್ ಗಳು ಎಷ್ಟು ವಿಧಿಸಬೇಕು ಅನ್ನೋದನ್ನು ಸಾರಿಗೆ ಇಲಾಖೆ ನಿಗದಿಪಡಿಸಿದೆ. ವಾಹನಗಳಲ್ಲಿ ಎ,ಬಿ,ಸಿ,ಡಿ ಎಂದು ನಾಲ್ಕು ವಿಭಾಗಗಳನ್ನು ಮಾಡಲಾಗಿದೆ.
5 ಲಕ್ಷಕ್ಕಿಂತ ಕಡಿಮೆ ವೆಚ್ಚದ ಕ್ಯಾಬ್ ಗಳು 4 ಕಿಮೀಗೆ ಕನಿಷ್ಟ 44 ರೂಪಾಯಿ ಶುಲ್ಕ ಪಡೆಯಬಹುದು. ನಂತರ ಪ್ರತಿ ಕಿಮೀಗೆ 11 ರಿಂದ 22 ರೂಪಾಯಿ ಶುಲ್ಕ ವಿಧಿಸಬಹುದಾಗಿದೆ. 5-10 ಲಕ್ಷ ಮೌಲ್ಯದ ಕ್ಯಾಬ್ ಗೆ ಕನಿಷ್ಠ ಶುಲ್ಕ 52 ರೂಪಾಯಿ ನಿಗದಿ ಮಾಡಲಾಗಿದೆ. 4 ಕಿಮೀ ನಂತರ ಪ್ರತಿ ಕಿಲೋ ಮೀಟರ್ ಗೆ 12-24 ರೂಪಾಯಿ ಪಡೆಯಬಹುದಾಗಿದೆ. ಬಿ ವಿಭಾಗದಲ್ಲಿ 10-16 ಲಕ್ಷ ಮೌಲ್ಯದ ಕ್ಯಾಬ್ ಗಳಲ್ಲಿ ಕನಿಷ್ಟ ಶುಲ್ಕ 68 ರೂ. ಆಗಿದ್ದು, ಕಿಮೀ ನಂತರ ಪ್ರತಿ ಕಿಲೋ ಮೀಟರ್ ಗೆ 16-34 ರೂಪಾಯಿ ಪಡೆಯಬಹುದು. 16 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಮೌಲ್ಯದ ಎ ವಿಭಾಗದ ಕ್ಯಾಬ್ ಗಳಿಗೆ ಕನಿಷ್ಠ ಶುಲ್ಕ 80 ರೂಪಾಯಿ. 4 ಕಿಮೀ ಬಳಿಕ ಪ್ರತಿ ಕಿಲೋ ಮೀಟರ್ ಗೆ ಪ್ರಯಾಣಿಕರಿಂದ 20-45 ರೂಪಾಯಿ ಪಡೆಯಲು ಅವಕಾಶವಿದ
Comments