ನೀರು ಹಂಚಿಕೆ ಸಂಬಂಧ ಕ್ಯಾತೆ ತೆಗೆದ ತಮಿಳುನಾಡು

11 Jan 2018 11:07 AM | General
364 Report

2007 ರ ನ್ಯಾಯಾಧೀಶರಣದ ಆದೇಶದ ಪ್ರಕಾರ, ವಾರ್ಷಿಕವಾಗಿ 192 ಟಿಎಂಸಿ ನೀರನ್ನು ಕರ್ನಾಟಕವು ಕಾವೇರಿ ನದಿಯಿಂದ ಹರಿಬಿಡಬೇಕು. ಆದರೆ ಪ್ರಸಕ್ತ ಸಾಲಿನಲ್ಲಿ ಕೇವಲ 111 ಟಿಎಂಸಿ ನೀರು ಬಿಡಲಾಗಿದೆ. ಅಗತ್ಯ ನೀರು ಬಿಡಿಸಿಕೊಳ್ಳಲು ಪ್ರಕ್ರಿಯೆ ಆರಂಭಿಸಲಾಗಿದೆ.

ತಮಿಳುನಾಡು ಸುಪ್ರೀಂ ಕೋರ್ಟ್ ನಲ್ಲಿ ಕಾವೇರಿ ನದಿ ವಿವಾದ ಕುರಿತು ಅಂತಿಮ ತೀರ್ಪು ಬರುತ್ತಿರುವ ಹೊತ್ತಿನಲ್ಲೇ ಮತ್ತೆ ನೀರು ಹಂಚಿಕೆ ಸಂಬಂಧ ಕ್ಯಾತೆ ಆರಂಭಿಸಿದ್ದು, ಇನ್ನೂ 81 ಟಿಎಂಸಿ ನೀರು ಬಿಡಲೇಬೇಕು ಎಂದು ಒತ್ತಾಯಿಸಿದೆ. ಮುಂದಿನ ಮೇಯೊಳಗೆ ಉಳಿದ 81 ಟಿಎಂಸಿ ನೀರು ಬಿಡಲೇಬೇಕೆಂದು ತಮಿಳುನಾಡು ವಿಧಾನಸಭೆಯಲ್ಲಿ ಸಿಎಂ ಕೆ. ಪಳನಿಸ್ವಾಮಿ ಹೇಳಿದ್ದಾರೆ. ಜೊತೆಗೆ ನ್ಯಾಯಾಂಗ ಹೋರಾಟದ ಬಗೆಗೂ ಪ್ರಸ್ತಾಪಿಸಿ, ಸುಪ್ರೀಂಕೋರ್ಟ್ ಆದೇಶಕ್ಕೆ ಸಂಬಂಧಿಸಿ ಅಗತ್ಯ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಉತ್ತರಿಸಿದ್ದಾರೆ.

Edited By

Shruthi G

Reported By

Madhu shree

Comments