ಗೋವಾದಲ್ಲಿ ಗೋಮಾಂಸ ವ್ಯಾಪಾರಿಗಳ ಮುಷ್ಕರ

ಗೋ ರಕ್ಷಕರ ಕಿರುಕುಳದಿಂದಾಗಿ ಕರ್ನಾಟಕದ ಬೆಳಗಾವಿಯಿಂದ ಗೋಮಾಂಸ ಆಮದು ಮಾಡಿಕೊಳ್ಳುವುದುಅನ್ನು ತಕ್ಷಣದಿಂದ ನಿಲ್ಲಿಸಿದ್ದೇವೆ ಎಂದು ವ್ಯಾಪಾರಿಗಳ ಸಂಘ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಇದೇ ವೇಳೆ ಗೋವಾ ಸರ್ಕಾರ ಗೋ ರಕ್ಷಕರು ನೀಡುತ್ತಿರುವ ಕಿರುಕುಳನ್ನು ತಡೆಗಟ್ಟುವ ಭರವಸೆ ನೀಡುವ ಹೊರತೂ ನಾವು ವ್ಯಾಪಾರ ಪ್ರಾರಂಭಿಸುವುದಿಲ್ಲ ಎಂದಿದೆ.
ಕರ್ನಾಟಕದಿಂದ ಗೋ ಮಾಂಶ ಆಮದು ಮಾಡಿಕೊಳ್ಳುವ ಸಮಯದಲ್ಲಿ ಗೋ ರಕ್ಷಕರು ಕಿರುಕುಳ ನೀಡುತ್ತಾರೆ ಎಂದು ಆರೋಪಿಸಿರುವ ಗೋವಾದ ಗೋ ಮಾಂಸ ವ್ಯಾಪಾರಿಗಳು ತಮ್ಮ ವ್ಯಾಪಾರವನ್ನು ನಿಲ್ಲಿಸಿ ರಾಜ್ಯಾದ್ಯಂತ ಮುಷ್ಕರಕ್ಕೆ ನಿರ್ಧರಿಸಿದ್ದಾರೆ.ಇದರಿಂದ ಗೋವಾದಲ್ಲಿ ಗೋಮಾಂಸದ ಕೊರತೆ ಉಂಟಾಗುವ ಸಾದ್ಯತೆಗಳಿದೆ. "ಈ ಕ್ರಿಸ್ ಮಸ್ ನಿಂದೀಚೆಗೆ ಗೋ ರಕ್ಷಕರ ಕಿರುಕುಳವು ರಾಜ್ಯದಲ್ಲಿ ಹೆಚ್ಚಾಗಿದ್ದು ಮಾಂಸವನ್ನು ಸಾಗಿಸುವ ವಾಹನಗಳನ್ನು ಕಾನೂನುಬಾಹಿರವಾಗಿ ತಡೆಯುತ್ತಿದ್ದಾರೆ. ಇದೀಗ ವ್ಯಾಪಾರಿಗಳು ಕರ್ನಾಟಕದಿಂದಾ ಗೋಮಾಂಸವನ್ನು ಆಮದು ಮಾಡಿಕೊಳ್ಳಬಾರದೆಂದು ನಿರ್ಧರಿಸಿದ್ದಾರೆ" ಖುರಾಶಿ ಮೀಟ್ ಟ್ರೇಡರ್ಸ್ ಅಸೋಸಿಯೇಷನ್ನ ಅಧ್ಯಕ್ಷ ಮನ್ನಾ ಬೆಪಾರಿ ಹೇಳಿದರು.
"ಸರ್ಕಾರ ನಡೆಸುವ ರಾಜ್ಯದ ಏಕೈಕ ಕಸಾಯಿಖಾನೆ 'ಗೋವಾ ಮೀಟ್ ಕಾಂಪ್ಲೆಕ್ಸ್' ಕಳೆದ ಮೂರು ತಿಂಗಳಿಂದ ಕಾರ್ಯ ನಿರ್ವಹಿಸುತ್ತಿಲ್ಲ. ಇದನ್ನು ಮತ್ತೆ ಪ್ರಾರಂಭಿಸಬೇಕು. ಇಂದು ಬೆಳಗ್ಗೆ ಇದಾಗಲೇ ಸ್ಟಾಕ್ ಆಗಿರುವ ಮಾಂಸ ಮಾರಾಟ ಮಾಡಲು ಕೆಲ ಅಂಗಡಿಗಳು ತೆರೆಯಲಿದೆ. ಸರಕು ಖಾಲಿ ಆಗುತ್ತಿದ್ದಂತೆ ಅವೂ ಸಹ ಮುಷ್ಕರದಲ್ಲಿ ಪಾಲ್ಗೊಳ್ಳುತ್ತವೆ." ಎಂದು ಬೆಪಾರಿ ವಿವರಿಸಿದ್ದಾರೆ. ಗೋವಾದಲ್ಲಿ ಸುಮಾರು 2300-2400 ಕೆ.ಜಿ ಗೋಮಾಂಸಕ್ಕೆ ಬೇಡಿಕೆ ಇದ್ದು ಇದರಲ್ಲಿ 2000 ಕೆ.ಜಿ ಮಾಂಸವನ್ನು ಗೋವಾ ಮೀಟ್ ಕಾಂಪ್ಲೆಕ್ಸ್ ಲಿ. ಪೂರೈಸುತ್ತದೆ. ಉಳಿದದ್ದನ್ನು ಕರ್ನಾಟಕದಿಂದ ಆಮದು ಮಾಡಿಕೊಳ್ಳಲಾಗುತ್ತದೆ
Comments