ಸಿಎಂ ನಿವಾಸದ ಮುಂದೆ ಆಲೂಗಡ್ಡೆ ಎಸೆದು ಆಕ್ರೋಶ ವ್ಯೆಕ್ತ ಪಡಿಸಿದ ರೈತರು

ಉತ್ತರ ಪ್ರದೇಶದಲ್ಲಿ ಆಲೂಗಡ್ಡೆ ಬೆಳೆಗಾರರ ಆಕ್ರೋಶ ಬೀದಿಗೆ ಬಂದಿದೆ. ಆಲೂಗಡ್ಡೆ ಬೆಳೆಗಾರರು ಸಿಎಂ ನಿವಾಸ ಹಾಗೂ ವಿಧಾನಸಭೆ ಮುಂದೆ ರಸ್ತೆಯಲ್ಲಿ ಆಲೂಗಡ್ಡೆ ಎಸೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾತ್ರಿ ಕೂಡ ರಾಜಭವನ ಮುಂದೆ ಆಲೂಗಡ್ಡೆ ಎಸೆದ ರೈತರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟಿದ್ದಾರೆ
ಆಲೂಗಡ್ಡೆ ಬೆಲೆ ಇಳಿದಿರುವುದೇ ಇದಕ್ಕೆ ಕಾರಣ. ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ ಆಲೂಗಡ್ಡೆ 4 ರೂಪಾಯಿಗೆ ಮಾರಾಟವಾಗ್ತಿದೆ. ಕೆ.ಜಿಗ 10 ರೂಪಾಯಿಯಂತೆ ಖರೀದಿ ಮಾಡಬೇಕೆಂಬುದು ಬೆಳೆಗಾರರ ಒತ್ತಾಯವಾಗಿದೆ. ಸರ್ಕಾರ ಆಲೂಗಡ್ಡೆಗೆ ಕನಿಷ್ಠ ಬೆಂಬಲ ಬೆಲೆ ನೀಡಬೇಕೆಂದು ರೈತರು ಒತ್ತಾಯಿಸಿದ್ದಾರೆ. ರಾಜಭವನ ಹಾಗೂ ಮುಖ್ಯಮಂತ್ರಿ ನಿವಾಸದ ಮುಂದೆ ಬಿದ್ದಿರುವ ಆಲೂಗಡ್ಡೆಯನ್ನು ಅಧಿಕಾರಿಗಳು ಎತ್ತುತ್ತಿದ್ದಾರೆ. ಆದ್ರೆ ವಾಹನ ಓಡಾಟದಿಂದಾಗಿ ಬಹುತೇಕ ಆಲೂಗಡ್ಡೆ ಹಾಳಾಗಿದೆ.
Comments