ಎಸ್ ಬಿ ಐ ನೀಡಿದ 'ಶಾಕ್' ಗೆ ದಂಗಾದ ಗ್ರಾಹಕಿ..!
ಎಲ್ಲಾ ಸರ್ಕಾರಿ ಬ್ಯಾಂಕ್ ಗಳಲ್ಲಿ ಖಾತೆದಾರರು ಕನಿಷ್ಟ ಬ್ಯಾಲೆನ್ಸ್ ಇಟ್ಟುಕೊಳ್ಳೋದು ಈಗ ಕಡ್ಡಾಯ. 2017ರ ಎಪ್ರಿಲ್ 1ರಿಂದ್ಲೇ ಈ ನಿಯಮ ಜಾರಿಯಾಗಿದೆ. ಮಿನಿಮಮ್ ಬ್ಯಾಲೆನ್ಸ್ ಮೆಂಟೇನ್ ಮಾಡದ ಗ್ರಾಹಕರಿಗೆ ದಂಡ ವಿಧಿಸಲು ಆರ್ ಬಿ ಐ ಅನುಮತಿ ನೀಡಿದೆ. ದೇಶದ ಅತಿ ದೊಡ್ಡ ಬ್ಯಾಂಕ್ ಎನಿಸಿಕೊಂಡಿರೋ SBI ಕೂಡ ಮಿನಿಮಮ್ ಬ್ಯಾಲೆನ್ಸ್ ಉಳಿಸಿಕೊಳ್ಳದ ಗ್ರಾಹಕರಿಗೆ ದಂಡ ಹಾಕ್ತಿದೆ.
ಮೆಟ್ರೋ ಸಿಟಿಗಳ ಗ್ರಾಹಕರು ಸದ್ಯ ತಮ್ಮ ಖಾತೆಯಲ್ಲಿ ಕನಿಷ್ಟ 3000 ರೂ. ಇಟ್ಟುಕೊಳ್ಳಬೇಕು. ಇಲ್ಲದೇ ಹೋದಲ್ಲಿ ದಂಡ ಹಾಕಲಾಗುತ್ತದೆ. ಈ ರೀತಿ ಗ್ರಾಹಕರಿಂದ ಎಸ್ ಬಿ ಐ ಪಡೆದಿರೋ ದಂಡದ ಮೊತ್ತವೇ 1771.67 ಕೋಟಿ ರೂಪಾಯಿ. ಎಸ್ ಬಿ ಐ ನ ಈ ಕ್ರಮ ವಯೋವೃದ್ಧರು ಮತ್ತು ಬಡವರಿಗೆ ಸಂಕಷ್ಟ ತಂದಿದೆ. ಪೆನ್ಷನ್ ಹಣದಲ್ಲೇ ಬದುಕು ಸಾಗಿಸ್ತಾ ಇದ್ದ ಕೇರಳದ ಮಹಿಳೆ ಹಮೀದಾ ಬೀವಿ ಕೂಡ ಅವರಲ್ಲೊಬ್ಬರು. ಎಸ್ ಬಿ ಐ ಖಾತೆ ಹೊಂದಿರೋ ಹಮೀದಾಗೆ 3300 ರೂಪಾಯಿ ಪೆನ್ಷನ್ ಹಣ ಬರುತ್ತದೆ. ಹಣ ಖಾತೆಗೆ ಕ್ರೆಡಿಟ್ ಆಗುತ್ತಿದ್ದಂತೆ, ಎಸ್ ಬಿ ಐ 3050 ರೂಪಾಯಿ ಡಿಡಕ್ಟ್ ಮಾಡಿದೆ. ಬಹಳ ಸಮಯದಿಂದ ಹಮೀದಾ ಮಿನಿಮಮ್ ಬ್ಯಾಲೆನ್ಸ್ ಮೆಂಟೇನ್ ಮಾಡಿಲ್ಲ ಅಂತಾ ದಂಡದ ರೂಪದಲ್ಲಿ ಹಣ ಡಿಡಕ್ಟ್ ಮಾಡಿಕೊಂಡಿದೆ. ಇದರಿಂದ ಹಮೀದಾಗೆ ತಿಂಗಳ ಖರ್ಚಿಗೆ ಬಿಡಿಗಾಸೂ ಇಲ್ಲದಂತಾಗಿದೆ. ಕೇರಳದ ಹಣಕಾಸು ಸಚಿವರು ಹಮೀದಾಳ ಬಗ್ಗೆ ಫೇಸ್ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
Comments