ಗಿನ್ನಿಸ್ ದಾಖಲೆಗೆ ಪ್ರಯತ್ನ ನಡೆಸುತ್ತಿರುವ ಮಗಂತಿ ಜಾಹ್ನವಿ
ಹೈದ್ರಾಬಾದ್ ನ 18 ವರ್ಷದ ಯುವತಿ ಮಗಂತಿ ಜಾಹ್ನವಿ ಕಾಲುಗಳಲ್ಲೇ ಚಮತ್ಕಾರ ಮಾಡಿದ್ದಾಳೆ. 140 ಚದರ ಮೀಟರ್ ಜಾಗದಲ್ಲಿ ಕಾಲುಗಳಿಂದ್ಲೇ ಪೇಂಟಿಂಗ್ ಮಾಡುವ ಮೂಲಕ ಗಿನ್ನಿಸ್ ದಾಖಲೆಗೆ ಪ್ರಯತ್ನ ನಡೆಸಿದ್ದಾಳೆ. ಕಾಲಿನಲ್ಲೇ ಹೂವು ಮತ್ತು ಎಲೆಗಳನ್ನು ಬಿಡಿಸಿದ್ದಾಳೆ. ಈ ಹಿಂದೆ 100 ಚದರ ಮೀಟರ್ ವಿಸ್ತಾರದಲ್ಲಿ ಕಾಲಿನಲ್ಲಿ ಪೇಂಟಿಂಗ್ ಮಾಡಲಾಗಿತ್ತು.
ಆ ದಾಖಲೆಯನ್ನು ಮುರಿಯಲು ಜಾಹ್ನವಿ ಪ್ರಯತ್ನ ನಡೆಸಿದ್ದಾಳೆ. ಸದ್ಯ ಬ್ರಿಟನ್ ನಲ್ಲಿ ಓದ್ತಾ ಇರೋ ಜಾಹ್ನವಿಗೆ ಚಿಕ್ಕಂದಿನಿಂದ್ಲೂ ಚಿತ್ರಕಲೆಯ ಬಗ್ಗೆ ವಿಪರೀತ ಆಸಕ್ತಿ ಇತ್ತು. ಓದಿನ ಜೊತೆಜೊತೆಗೆ ಪೇಂಟಿಂಗ್, ಡಾನ್ಸ್ ಎರಡನ್ನೂ ಜಾಹ್ನವಿ ಮುಂದುವರಿಸಿದ್ದಳು. ವಿಶ್ವದಾಖಲೆಗಾಗಿ ಪ್ರಯತ್ನ ನಡೆಸಿರೋ ಜಾಹ್ನವಿಗೆ ಹೆತ್ತವರು ಬೆಂಬಲ ನೀಡಿದ್ದಾರಂತೆ. ಪೂರ್ತಿ ಪೇಂಟಿಂಗ್ ಮಾಡಿ ಮುಗಿಸಲು ಜಾಹ್ನವಿಗೆ 9 ಗಂಟೆಗಳ ಸಮಯ ಬೇಕಾಗಿದೆ.
Comments