ಎಟಿಎಂ ಬಳಕೆದಾರರಿಗೆ ತಿಳಿಯ ಬೇಕಾದ ವಿಷಯ…!!

ಎಟಿಎಂನಲ್ಲಿ ಹಣ ಡ್ರಾ ಮಾಡಲು ಡೆಬಿಟ್ ಕಾರ್ಡ್ ಹಾಗೂ ಪಿನ್ ನಂಬರ್ ಬೇಕು. ಇದು ಎಟಿಎಂ ಬಳಕೆದಾರರಿಗೆ ತಿಳಿದಿರುವ ವಿಷ್ಯ. ಆದ್ರೆ ಇನ್ಮುಂದೆ ಎಟಿಎಂಗಳು ಇನ್ನಷ್ಟು ಡಿಜಿಟಲ್ ಆಗಲಿವೆ. ಸ್ಟಾರ್ಟ್‌ಅಪ್ ಪೋನಿಯರ್ಬಾಯ್ ಟೆಕ್ನಾಲಜಿ ಜೊತೆ ಯಸ್ ಬ್ಯಾಂಕ್ ಒಪ್ಪಂದ ಮಾಡಿಕೊಂಡಿದೆ.
ಈ ಒಪ್ಪಂದದ ಅಡಿಯಲ್ಲಿ ಆಧಾರ್ ಆಧಾರಿತ ಯಸ್ ಬ್ಯಾಂಕ್ ಎಟಿಎಂ ಶುರುವಾಗಲಿದೆ. ಇದಕ್ಕೆ ಕಾರ್ಡ್ ಹಾಗೂ ಪಿನ್ ಅವಶ್ಯಕತೆಯಿಲ್ಲ. ಗ್ರಾಹಕರು ರಿಟೇಲರ್ ಬಳಿ ಹಣ ಜಮಾ ಮಾಡಬಹುದು ಹಾಗೂ ಹಿಂಪಡೆಯಬಹುದಾಗಿದೆ.ಪೋನಿಯರ್ಬಾಯ್ ಮೊಬೈಲ್ ಅಪ್ಲಿಕೇಷನನ್ನು ಸ್ಮಾರ್ಟ್ಫೋನ್ ನಲ್ಲಿ ಬಳಸಬಹುದಾಗಿದೆ. ಇದ್ರಲ್ಲಿ ಚಿಲ್ಲರೆ ವ್ಯಾಪಾರಿಗಳು ಗ್ರಾಹಕರಿಗಾಗಿ ಆಧಾರ್ ಎಟಿಎಂ ತೆರೆಯಬಹುದಾಗಿದೆ. ಇದು ಆಧಾರ್ ಬ್ಯಾಂಕ್ ರೀತಿಯಲ್ಲಿ ಕೆಲಸ ಮಾಡಲಿದೆ. ಇದ್ರಲ್ಲಿ ಗ್ರಾಹಕರು ಸುಲಭವಾಗಿ ಹಣ ಠೇವಣಿ ಇಡುವ ಹಾಗೂ ತೆಗೆಯುವ ಕೆಲಸ ಮಾಡಬಹುದಾಗಿದೆ.
ಆಧಾರ್ ಸಂಖ್ಯೆ ಹಾಗೂ ಫಿಂಗರ್ ಫ್ರಿಂಟ್ ಬಳಸಿ ಗ್ರಾಹಕರು ಹಣವನ್ನು ಡ್ರಾ ಮಾಡಬಹುದು. ಹಾಗೆ ಬೇರೆ ಸೇವೆಯನ್ನು ಪಡೆಯಬಹುದು. ಯಸ್ ಬ್ಯಾಂಕ್ ದೇಶದ ಮೂಲೆ ಮೂಲೆ ಜನರಿಗೆ ಈ ಸೇವೆ ನೀಡಲು ನಿರ್ಧರಿಸಿದೆ. ಚಿಲ್ಲರೆ ವ್ಯಾಪಾರಿ ಸಂಘಟನೆ ಜೊತೆ ಒಪ್ಪಂದ ಮಾಡಿಕೊಂಡಿದ್ದು ಜನರಿಗೆ ಈ ಬ್ಯಾಂಕ್ ಬಗ್ಗೆ ಅರಿವು ಮೂಡಿಸಲು ಮುಂದಾಗಿದೆ.
Comments