ಗಾರ್ಮೆಂಟ್ಸ್ ಮಹಿಳಾ ಉದ್ಯೋಗಿಗಳಿಗೆ ಬಿಎಂಟಿಸಿಯಿಂದ ಗುಡ್ ನ್ಯೂಸ್
ಗಾರ್ಮೆಂಟ್ಸ್ ಗಳಲ್ಲಿ ಪಾಳಿ ಪ್ರಕಾರ ಕೆಲಸ ಮಾಡುವ ಮಹಿಳೆಯರ ಅನುಕೂಲಕ್ಕಾಗಿ ರಿಯಾಯಿತಿ ದರದ ಇಂದಿರಾ ಬಸ್ ಪಾಸ್ ನೀಡಲು ಸಾರಿಗೆ ಇಲಾಖೆ ಮುಂದಾಗಿದೆ.
ಗಾರ್ಮೆಂಟ್ಸ್ ಗಳಲ್ಲಿ ಪಾಳಿ ಪ್ರಕಾರ ಕೆಲಸ ಮಾಡುವ ಮಹಿಳೆಯರ ಅನುಕೂಲಕ್ಕಾಗಿ ಪ್ರತ್ಯೇಕ ಬಿಎಂಟಿಸಿ ಬಸ್ ಸೌಲಭ್ಯ ಕಲ್ಪಿಸುವುದಾಗಿ ಹಿಂದಿನ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಭರವಸೆ ನೀಡಿದ್ದರು. ಆದರೆ ಅದು ಸಾದ್ಯವಾಗದ ಕಾರಣ, ಈಗ ಬಸ್ ಬದಲು ಇಂದಿರಾ ಹೆಸರಲ್ಲಿ ಬಸ್ ಪಾಸ್ ನೀಡಲು ಇಲಾಖೆ ಮುಂದಾಗಿದೆ. ಬಸ್ ಸೌಲಭ್ಯ ಕಲ್ಪಿಸಲು ಸಾದ್ಯವಾದ ಕಾರಣ ರಿಯಾಯಿತಿ ದರದಲ್ಲಿ ಬಸ್ ಪಾಸ್ ನೀಡುವಂತೆ ಕಾರ್ಮಿಕ ಒಕ್ಕೂಟಗಳು ಇಲಾಖೆಗೆ ಮನವಿ ಮಾಡಿದ್ದವು. ಇದಕ್ಕೆ ಸಚಿವರೇ ಆಸಕ್ತಿ ತೋರಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ಕೆಲ ದಿನಗಳ ಹಿಂದೆ ಸಂಬಂಧಪಟ್ಟವರ ಜತೆ ಮಾತುಕತೆ ನಡೆಸಿದ್ದು, ಪಾಸ್ ಗೆ ಒಪ್ಪಿಗೆ ದೊರೆತಿದೆ ಎಂದು ಬಿಎಂಟಿಸಿ ಉನ್ನತ ಮೂಲಗಳು ತಿಳಿಸಿವೆ.ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ, ಬಿಎಂಟಿಸಿ , ಕಾರ್ಮಿಕ ಇಲಾಖೆ, ಕಾರ್ಖಾನೆ ಮಾಲೀಕರ ಸಂಘ ಜಂಟಿಯಾಗಿ ಸೇರಿ ಈ ಪಾಸ್ ವಿತರಣೆಗೆ ಸಿದ್ಧತೆ ನಡೆಸಿದೆ. ಪಾಸ್ ಗೆ ಯಾವ ಇಲಾಖೆ, ಒಕ್ಕೂಟಗಳಿಂದ ಯಾರು ಎಷ್ಟು ಮೊತ್ತ ಭರಿಸಬೇಕು. ಕಾರ್ಮಿಕರು ಕೂಡ ಇಂತಿಷ್ಟು ಭರಿಸಬೇಕೇ ಇಲ್ಲವೇ ಗಾರ್ಮೆಂಟ್ಸ್ ಕಂಪನಿಗಳೇ ಪೂರ್ಣ ಹಣ ನೀಡಬೇಕೆ ಎಂಬ ವಿಷಯದ ಕುರಿತು ಚರ್ಚೆಗಳು ನಡೆದಿದೆ.
Comments