SBI ಉಳಿತಾಯ ಖಾತೆದಾರರಿಗೆ ಸಿಹಿ ಸುದ್ದಿ
ಕಳೆದ ಜೂನ್ ನಲ್ಲಿ ಎಸ್ ಬಿ ಐ ಕನಿಷ್ಟ ಬ್ಯಾಲೆನ್ಸ್ ಮಿತಿಯನ್ನು 5000 ರೂಪಾಯಿಗೆ ಏರಿಕೆ ಮಾಡಿತ್ತು. ಆದ್ರೆ ಗ್ರಾಹಕರಿಂದ ತೀವ್ರ ವಿರೋಧ ವ್ಯಕ್ತವಾಗಿದ್ದರಿಂದ ಮೆಟ್ರೋ ನಗರಗಳಲ್ಲಿ 3000 ರೂಪಾಯಿ, ಸೆಮಿ ಅರ್ಬನ್ ಏರಿಯಾಗಳಲ್ಲಿ 2000 ರೂ. ಹಾಗೂ ಗ್ರಾಮೀಣ ಪ್ರದೇಶದಲ್ಲಿ 1000 ರೂ. ಗೆ ಇಳಿಕೆ ಮಾಡಿತ್ತು.
ಸೇವಿಂಗ್ಸ್ ಖಾತೆ ಹೊಂದಿರುವ ಗ್ರಾಹಕರ ಕನಿಷ್ಟ ಬ್ಯಾಲೆನ್ಸ್ ಅಗತ್ಯತೆಯನ್ನು ಬದಲಾಯಿಸಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನಿರ್ಧರಿಸಿದೆ. ಸದ್ಯ ಕನಿಷ್ಟ ಬ್ಯಾಲೆನ್ಸ್ ಮಿತಿ 3000 ರೂ. ಇದ್ದು, ಇದರಲ್ಲಿ ಕಡಿತ ಮಾಡಲು ಮುಂದಾಗಿದೆ. ಕನಿಷ್ಟ ಬ್ಯಾಲೆನ್ಸ್ ಮಿತಿ ಮೂಲಕವೇ ಎಸ್ ಬಿ ಐ ಲಾಭ ಮಾಡಿಕೊಳ್ತಿದೆ ಅನ್ನೋ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಮಿತಿ ಇಳಿಕೆ ಮಾಡಲು ತೀರ್ಮಾನಿಸಲಾಗಿದೆ. 3000 ದಿಂದ 1000 ರೂಪಾಯಿಗೆ ಇಳಿಕೆ ಮಾಡುವ ಸಾಧ್ಯತೆ ಇದೆ.
Comments