ಪಾಕ್ ಸೇನೆಗೆ ತಕ್ಕ ಪಾಠ ಕಲಿಸಿದ ಭಾರತ
ಪದೇ ಪದೇ ಗಡಿಯಲ್ಲಿ ಶಾಂತಿ ಕದಡುತ್ತಿರುವ ಪಾಕ್ಗೆ ಭಾರತೀಯ ಸೇನೆ ಗುರುವಾರ ತಕ್ಕ ಪಾಠ ಕಲಿಸಿದೆ. ಪಾಕ್ ರೇಂಜರ್ಸ್ಗಳನ್ನು ಹೊಡೆದುರುಳಿಸಿದೆ. ಬುಧವಾರವಷ್ಟೇ ಭಾರತೀಯ ಬಿಎಸ್ಎಫ್ ಯೋಧರೊಬ್ಬರು ಪಾಕ್ ಗುಂಡೇಟಿಗೆ ಬಲಿಯಾಗಿದ್ದರು. ಇದಕ್ಕೆ ತಕ್ಕ ಪ್ರತೀಕಾರ ತೀರಿಸಕೊಂಡಿರುವ ಭಾರತೀಯ ಸೇನೆ, ಪಾಕಿಸ್ತಾನದ 12 ರಿಂದ 15 ರೇಂಜರ್ಸ್ಗಳನ್ನು ಬಲಿ ತೆಗೆದುಕೊಂಡಿದೆ.
ಸಾಂಬಾ ಸೆಕ್ಟರ್ ಬಳಿ ಇರುವ ಪಾಕ್ನ ಐದು ಶಿಬಿರಗಳನ್ನು ನಾಶ ಪಡಿಸಿರುವ ಭಾರತೀಯ ಸೇನೆ ಆರ್. ಎಸ್.ಪುರ ಸೆಕ್ಟರ್ ಬಳಿ ಗಡಿ ದಾಟುತ್ತಿದ್ದ ಪಾಕ್ ಕಿಡಿಗೇಡಿಯೊಬ್ಬನನ್ನು ಹೊಡೆದುರುಳಿಸಿದೆ. ಜಮ್ಮು- ಕಾಶ್ಮೀರ ಬಿಎಸ್ಎಫ್ನ ಐಜಿ ಇದರ ಕುರಿತು ಅಧಿಕೃತ ಮಾಹಿತಿ ನೀಡಿದ್ದಾರೆ.
Comments