ಶೃಂಗೇರಿಯ ಯಾಗವನ್ನು ಅರ್ಧಕ್ಕೆ ನಿಲ್ಲಿಸಿದ ದೇವೇಗೌಡ್ರು

04 Jan 2018 12:47 PM | General
393 Report

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಅತ್ತೆ, ದೇವೇಗೌಡರ ಪತ್ನಿ ಚೆನ್ನಮ್ಮ ಅವರ ತಾಯಿ ಕಾಳಮ್ಮ(100) ನಿಧನರಾದರು.ಕಾಳಮ್ಮ ಅವರ ಸಾವಿನ ಹಿನ್ನೆಲೆಯಲ್ಲಿ ಶೃಂಗೇರಿ ಶಾರದಾ ಪೀಠದಲ್ಲಿ ನಡೆಯುತ್ತಿರುವ ಅತಿರುದ್ರ ಮಹಾಯಾಗದಿಂದ ದೇವೇಗೌಡರ ಕುಟುಂಬ ವಾಪಸಾಗಿದೆ ಅಂತ ತಿಳಿದು ಬಂದಿದೆ.

ಶೃಂಗೇರಿಯಲ್ಲಿ ಅತಿರುದ್ರ ಮಹಾಯಾಗದ ಎರಡನೇ ದಿನದ ಪೂಜೆಯಲ್ಲಿ ದೇವೇಗೌಡ, ಚೆನ್ನಮ್ಮ ಮತ್ತು ಕುಟುಂಬ ಭಾಗವಹಿಸಿತ್ತು. ಈ ಅತಿರುದ್ರ ಮಹಾಯಾಗ 12 ದಿನ ನಡೆಯಬೇಕಿತ್ತು.ಇನ್ನು ಇದೇ ವೇಳೆ ಮೃತ ಕಾಳಮ್ಮ ಅವರು ಅನಾರೋಗ್ಯದಿಂದ ಇತ್ತೀಚೆಗೆ ಆಸ್ಪತ್ರೆ ಸೇರಿದ್ದು, ಬಳಿಕ ಹಾಸನದ ಮನೆಯಲ್ಲಿದ್ದರು. ಹೊಳೆನರಸೀಪುರ ತಾಲೂಕಿನ ಮುತ್ತಿಗೆ ಹಿರಿಯಳ್ಳಿಯಲ್ಲಿ ಅಂತ್ಯಕ್ರಿಯೆ ನಡೆಯಲಿದ್ದು, ದೇವೇಗೌಡರು ಅಂತ್ಯಕ್ರಿಯೆಯಲ್ಲಿ ಭಾಗವಹಿಸುವರು.

Edited By

Shruthi G

Reported By

Shruthi G

Comments