ಸೈಕಲ್ ಮೂಲಕ ವಿಶ್ವ ಸುತ್ತಲು ಮುಂದಾಗಿರುವ ಯುವತಿ

ಯುನೈಟೆಡ್ ಕಿಂಗ್ಡಂ ನ ಬೋರ್ನ್ ಮೌತ್ ವಿಶ್ವವಿದ್ಯಾನಿಲಯದಲ್ಲಿ ಎರಡನೇ ವರ್ಷದ ಸ್ಪೋರ್ಟ್ ಮ್ಯಾನೇಜ್ಮೆಂಟ್ ನಲ್ಲಿ ವ್ಯಾಸಂಗ ಮಾಡುತ್ತಿರುವ ವೇದಾಂಗಿ ಕುಲಕರ್ಣಿ ಈ ವಿಶಿಷ್ಟ ಸಾಧನೆಗೆ ಮುಂದಾಗಿದ್ದು, 130 ದಿನಗಳಲ್ಲಿ 29 ಸಾವಿರ ಕಿಲೋ ಮೀಟರ್ ಕ್ರಮಿಸುವ ಗುರಿ ಹೊಂದಿದ್ದಾರೆ.130 ದಿನಗಳಲ್ಲಿ 29 ಸಾವಿರ ಕಿಲೋಮೀಟರ್ ಕ್ರಮಿಸಲು ಪ್ರತಿನಿತ್ಯ 320 ಕಿಲೋಮೀಟರ್ ಸೈಕ್ಲಿಂಗ್ ಮಾಡಬೇಕಿದ್ದು, ಇದಕ್ಕಾಗಿ ಕಠಿಣ ತರಬೇತಿ ಪಡೆಯುತ್ತಿದ್ದಾರೆ.
19 ವರ್ಷದ ಪುಣೆ ಯುವತಿಯೊಬ್ಬರು ವಿಶಿಷ್ಟ ಸಾಧನೆ ಮಾಡಲು ಹೊರಟಿದ್ದಾರೆ. ಕೇವಲ 130 ದಿನಗಳಲ್ಲಿ ಸೈಕಲ್ ನಲ್ಲಿ ವಿಶ್ವ ಸುತ್ತಲು ಮುಂದಾಗಿದ್ದು, ಇದಕ್ಕಾಗಿ ಪ್ರತಿನಿತ್ಯ ನೂರಾರು ಕಿಲೋಮೀಟರ್ ಸೈಕಲ್ ತುಳಿಯುವ ಮೂಲಕ ಅಭ್ಯಾಸ ಮಾಡುತ್ತಿದ್ದಾರೆ. ತಮ್ಮ ಈ ಸಾಹಸ ಯಾತ್ರೆಗೆ #StepUpAndRideOn ಎಂದು ಹೆಸರಿಟ್ಟಿರುವ ವೇದಾಂಗಿ ಕುಲಕರ್ಣಿ ತಮ್ಮ ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಹೆಜ್ಜೆಯಿಟ್ಟಿದ್ದಾರೆ.
Comments