ಇನ್ಮುಂದೆ ಎಲ್ಲ ATM ಗಳಲ್ಲಿ ಸಿಗಲಿದೆ 200 ರೂ. ನೋಟು

ಹೆಚ್ಚಿನ ಪ್ರಮಾಣದಲ್ಲಿ ಎಟಿಎಂಗಳಿಗೆ 200 ರೂಪಾಯಿ ಮುಖಬೆಲೆಯ ನೋಟುಗಳನ್ನು ಪೂರೈಸುವಂತೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಎಲ್ಲಾ ಬ್ಯಾಂಕ್ ಗಳಿಗೆ ಸೂಚಿಸಿದೆ. ಸಾರ್ವಜನಿಕರಿಗೆ ಕಡಿಮೆ ಮುಖಬೆಲೆಯ ನೋಟುಗಳು ಲಭ್ಯವಾಗಲಿ ಅನ್ನೋದು ಆರ್ ಬಿ ಐ ಉದ್ದೇಶ.
ಅತಿ ಶೀಘ್ರದಲ್ಲಿ ಎಲ್ಲಾ ಎಟಿಎಂಗಳಲ್ಲೂ 200 ರೂಪಾಯಿ ನೋಟುಗಳು ಲಭ್ಯವಾಗಬೇಕೆಂದು ಸೂಚನೆ ನೀಡಿದೆ. ಆದ್ರೆ ಈ ಪ್ರಕ್ರಿಯೆಗೆ ಇನ್ನೂ 5-6 ತಿಂಗಳುಗಳೇ ಬೇಕು ಅಂತಾ ಹೇಳಲಾಗ್ತಿದೆ. 2016ರಲ್ಲಿ 500 ಮತ್ತು 1000 ರೂ. ನೋಟುಗಳನ್ನು ನಿಷೇಧಿಸಲಾಗಿತ್ತು. ನಂತರ ಕೇಂದ್ರ ಸರ್ಕಾರ 500 ರೂಪಾಯಿಯ ಹೊಸ ನೋಟು ಹಾಗೂ 2000 ರೂ. ಮುಖಬೆಲೆಯ ನೋಟುಗಳನ್ನು ಚಲಾವಣೆಗೆ ತಂದಿತ್ತು. ಆದ್ರೆ 2000 ರೂಪಾಯಿ ನೋಟುಗಳಿಗೆ ಚಿಲ್ಲರೆ ಸಿಗದೆ ಜನಸಾಮಾನ್ಯರು ಪರದಾಡುತ್ತಿದ್ದಾರೆಂಬ ಆರೋಪ ಬಂದಿದ್ದರಿಂದ, 200 ರೂ. ನೋಟನ್ನು ಬಿಡುಗಡೆ ಮಾಡಲಾಗಿತ್ತು.
Comments