ಷಾ ಅವರನ್ನು ಮೀರಿಸುವ ಚಾಣಾಕ್ಷತೆ ಸಿದ್ದರಾಮಯ್ಯ ನವರಿಗಿದೆ : ಎಚ್ ಡಿಡಿ ವ್ಯಂಗ್ಯ

ಸಿಎಂ ಸಿದ್ದರಾಮಯ್ಯ ಅವರಿಗಿಂತ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಚಾಣಾಕ್ಷ ಏನಲ್ಲ. ಷಾ ಅವರನ್ನು ಮೀರಿಸುವ ಚಾಣಾಕ್ಷತೆ ಸಿದ್ದರಾಮಯ್ಯ ಅವರಿಗಿದೆ ಎಂಬುದು ಇತ್ತೀಚಿನ ಅವರ ಭಾಷಣಗಳಿಂದ ತಿಳಿದು ಬರುತ್ತಿದೆ. ಷಾನ ಎಲ್ಲ ತಂತ್ರ ಸಿದ್ದರಾಮಯ್ಯನ ಕಾಲ ಮಧ್ಯೆ ನುಸುಳಿ ಹೋಗುತ್ತವೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ವ್ಯಂಗ್ಯವಾಡಿದರು.
2013ರಲ್ಲಿ 123 ಸ್ಥಾನ ಗೆದ್ದಿರುವುದು ಮಹಾ ಪೌರುಷವಲ್ಲ. ಜೆಡಿಎಸ್-ಬಿಜೆಪಿ ಮೈತ್ರಿ ನಂತರ ಕಾಂಗ್ರೆಸ್ಗೆ ಸ್ವಲ್ಪ ನೆರವಾಯಿತು. ಆದರೆ, ಈಗ ಮೂಲ ಕಾಂಗ್ರೆಸ್ಸಿಗರು ಮೂಲೆಗುಂಪಾಗಿದ್ದಾರೆ. ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಕೂಡ ಸಿದ್ದರಾಮಯ್ಯರ ಆಣತಿಯಂತೆ ಕೆಲಸ ಮಾಡಬೇಕಾದ ಪರಿಸ್ಥಿತಿ ನಿರ್ವಣವಾಗಿದೆ. ಮಧುಗಿರಿಯಲ್ಲಿ ಅನಿತಾ ಕುಮಾರಸ್ವಾಮಿ ಅವರನ್ನು ಸೋಲಿಸಲು ಕಳುಹಿಸಿಕೊಟ್ಟ ರಾಯಭಾರಿಗಳು ಏನು ಮಾಡುತ್ತಾರೆ ನೋಡೋಣ ಎಂದು ಎಚ್.ಡಿ.ದೇವೇಗೌಡ ಹೇಳಿದರು.
ಸಿಎಂ ಸಿದ್ದರಾಮಯ್ಯ ಕೋಲಾರದಲ್ಲಿ ನಡೆದ ಸಾಧನಾ ಸಮಾವೇಶದಲ್ಲಿ ನನ್ನ ಬಗ್ಗೆ ಅಗೌರವದ ಮಾತುಗಳನ್ನು ಆಡಿದ್ದಾರೆ. ನನ್ನಲ್ಲಿ ದ್ವೇಷವಿಲ್ಲ. ಆದರೆ ಸತ್ಯ ಹೇಳಿದ್ದೇನೆ. ಸಿಎಂ ಕುರಿತು ನಾನು ಮಾಡಿರುವ ಆರೋಪಕ್ಕೆ ಬದ್ಧ ಎಂದು ಎಚ್.ಡಿ.ದೇವೇಗೌಡ ಪುನರುಚ್ಚರಿಸಿದರು.
Comments