ಹೊಸ ವರ್ಷದಲ್ಲಿ ದೊಡ್ಡಗೌಡರಿಂದ ಮಹಾ ಯಾಗ...ಹಿನ್ನಲೆ ಏನು?

ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಪತ್ನಿ ಚನ್ನಮ್ಮ, ಪುತ್ರ ರೇವಣ್ಣ ಜೊತೆ ಜಿಲ್ಲೆಯ ಶೃಂಗೇರಿಗೆ ಅಗಮಿಸಿದ್ದಾರೆ.ಹೆಲಿಕ್ಯಾಪ್ಟರ್ ಮೂಲಕ ಶೃಂಗೇರಿಗೆ ಅಗಮಿಸಿದ ದೇವೇಗೌಡರ ಕುಟುಂಬ, ಶೃಂಗೇರಿ ಜಗದ್ಗುರುಗಳಾದ ಭಾರತೀ ತೀರ್ಥ ಸ್ವಾಮೀಜಿ, ವಿಧುಶೇಖರ ಸ್ವಾಮೀಜಿ ಅವರನ್ನ ಭೇಟಿ ಮಾಡಿದ್ದಾರೆ.
ಬಳಿಕ ಶಾರಾದಾಂಬೆಯ ದರ್ಶನ ಪಡೆದಿದ್ದಾರೆ. ನಾಳೆಯಿಂದ ಶ್ರೀ ಮಠದ 150 ಪುರೋಹಿತರ ನೇತೃತ್ವದಲ್ಲಿ ಅತಿ ರುದ್ರ ಮಹಾಯಾಗ ನಡೆಯಲಿದೆ. ಈ ಯಾಗ 12 ದಿನ ನಡೆಯಲಿದ್ದು, ಜನವರಿ 14 ರಂದು ಪೂರ್ಣಾಹುತಿಯಾಗಲಿದೆ.ಶ್ರೀಮಠದ ಅವರಣದಲ್ಲಿರುವ ಯಾಗ ಮಂಟಪ ನಡೆಯಲಿರುವ ಅತಿ ಮಹಾರುದ್ರಯಾಗವನ್ನು ಕುಟುಂಬ ಹಿತದೃಷ್ಟಿಯಿಂದ ನಡೆಯಲಿದೆ. ಜನವರಿ 14 ರಂದು ಮಾಜಿ ಮುಖ್ಯಮಂತ್ರಿ ಎಚ್.ಡಿ .ಕುಮಾರಸ್ವಾಮಿ ಪೂರ್ಣಾಹುತಿಯಲ್ಲಿ ಭಾಗಿಯಾಗಲಿದ್ದಾರೆ.
Comments