ಹೊಸ ವರ್ಷದಂದು ಭಾರತದಲ್ಲಿ ಅತ್ಯಧಿಕ ಮಕ್ಕಳು ಜನಿಸಿದ್ದಾರೆ..!!

ಭಾರತದಲ್ಲಿ 69070 ಮಕ್ಕಳು ಜನಿಸಿದ್ದು, 2ನೇ ಸ್ಥಾನದಲ್ಲಿ ಚೀನಾ ಇದೆ. ಚೀನಾದಲ್ಲಿ ಹೊಸ ವರ್ಷದಂದು 44,760 ಮಕ್ಕಳು ಜನಿಸಿದ್ದಾರೆ. ಇನ್ನು ನೈಜೀರಿಯಾ ಮೂರನೇ ಸ್ಥಾನದಲ್ಲಿದ್ದು, 20, 210 ಮಕ್ಕಳು ಜನಿಸಿದ್ದಾರೆ. ಉಳಿದಂತೆ ಇಂಡೋನೇಷಿಯಾ ನಾಲ್ಕನೇ ಸ್ಥಾನದಲ್ಲಿದ್ದರೆ ಅಮೆರಿಕವೂ 5ನೇ ಸ್ಥಾನದಲ್ಲಿದೆ.
ಭಾರತದಲ್ಲಿ ದಿನದಿಂದ ದಿನಕ್ಕೆ ಜನಸಂಖ್ಯೆಯ ಪ್ರಮಾಣ ಅತ್ಯಧಿಕ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಹೊಸ ವರ್ಷದ ದಿನ ವಿಶ್ವದಲ್ಲಿ ಎಷ್ಟು ಮಕ್ಕಳು ಜನಿಸಿದ್ದಾರೆ ಎಂದು ಯುನಿಸೆಫ್ ಬಿಡುಗಡೆ ಮಾಡಿದ ಅಂಕಿ ಅಂಶಗಳ ಪ್ರಕಾರ ವಿಶ್ವದಲ್ಲಿ ಹೊಸ ವರ್ಷದ ದಿನ ಒಟ್ಟು 386 000 ಮಕ್ಕಳು ಜನಿಸಿದ್ದು, ಭಾರತದಲ್ಲಿ ಜನಿಸಿದ ಮಕ್ಕಳ ಸಂಖ್ಯೆಯೆ ಹೆಚ್ಚಿದೆ.
Comments