ಏರ್ ಟೆಲ್ ಪ್ರಿ ಪೇಯ್ಡ್ ಗ್ರಾಹಕರಿಗೆ ಗುಡ್ ನ್ಯೂಸ್
ಏರ್ಟೆಲ್ ತನ್ನ ಗ್ರಾಹಕರಿಗಾಗಿ ಹೊಸ ಆಫರ್ ಬಿಡುಗಡೆ ಮಾಡಿದೆ. ಇದು ಪ್ರಿಪೇಯ್ಡ್ ರಿಚಾರ್ಜ್ ಆಫರ್. ಗ್ರಾಹಕರು 799 ರೂಪಾಯಿ ರೀಚಾರ್ಜ್ ಮಾಡಿದ್ರೆ ಪ್ರತಿದಿನ 3.5 ಜಿಬಿ 4ಜಿ ಡೇಟಾ ದೊರೆಯಲಿದೆ. ಈ ಪ್ಲಾನ್ 28 ದಿನಗಳ ವ್ಯಾಲಿಡಿಟಿ ಹೊಂದಿದೆ.
28 ದಿನಗಳಿಗೆ ಏರ್ಟೆಲ್ 98 ಜಿಬಿ 4ಜಿ ಡೇಟಾ ನೀಡುತ್ತಿದೆ. ದೆಹಲಿ/ಎನ್ ಸಿ ಆರ್, ಅಸ್ಸಾಂ, ಯುಪಿ ಈಸ್ಟ್, ಚೆನ್ನೈ, ಮುಂಬೈ, ಯುಪಿ ವೆಸ್ಟ್ ಮತ್ತು ಉತ್ತರಾಖಂಡ್ ನಲ್ಲಿ ಈ ಆಫರ್ ಅನ್ನು ನವೆಂಬರ್ ನಲ್ಲಿಯೇ ಬಿಡುಗಡೆ ಮಾಡಲಾಗಿತ್ತು. 799 ರೂ. ಪ್ಲಾನ್ ನಲ್ಲಿ ಅನಿಯಮಿತ ಸ್ಥಳೀಯ, ರೋಮಿಂಗ್ ಮತ್ತು ಎಸ್ ಟಿ ಡಿ ಕರೆಗಳನ್ನು ಮಾಡಬಹುದು. ಅನಿಯಮಿತ ಎಸ್ ಎಂ ಎಸ್ ಸೌಲಭ್ಯವೂ ಇದೆ. ಮೊದಲು ಇದೇ ಪ್ಲಾನ್ ನಲ್ಲಿ ದಿನಕ್ಕೆ 3 ಜಿಬಿ ಡೇಟಾ ನೀಡಲಾಗುತ್ತಿತ್ತು. ಈಗ ಅದನ್ನು 3.5 ಜಿಬಿಗೆ ಹೆಚ್ಚಳ ಮಾಡಲಾಗಿದೆ.
Comments