ಕುಡಿದು ಡ್ರೈವಿಂಗ್ ಮಾಡಿದವರಿಗೆ ಪೊಲೀಸರಿಂದ ತಕ್ಕ ಶಾಸ್ತಿ
ಹೊಸ ವರ್ಷದ ಸಂಭ್ರಮಾಚರಣೆ ಸಂದರ್ಭದಲ್ಲಿ ಸಂಚಾರಿ ನಿಯಮಗಳನ್ನು ಉಲ್ಲಂಘಿಸಬೇಡಿ, ಕುಡಿದು ವಾಹನ ಚಲಾಯಿಸಬೇಡಿ ಎಂದು ವಾಹನ ಸವಾರರಿಗೆ ಬೆಂಗಳೂರು ಪೊಲೀಸರು ಸಾಕಷ್ಟು ಜಾಗೃತಿಯನ್ನುಂಟು ಮಾಡಿದ್ದರು.
ಆದರೂ ಪೊಲೀಸರ ಮನವಿಗೆ ಕ್ಯಾರೇ ಎನ್ನದವರಿಗೆ ಪೊಲೀಸರು ರಾತ್ರೋ ರಾತ್ರಿ ತಕ್ಕ ಶಾಸ್ತಿಯನ್ನು ಮಾಡಿದ್ದಾರೆ. ಹೌದು, ಕಳೆದ ಒಂದು ರಾತ್ರಿಯಲ್ಲೇ ಬೆಂಗಳೂರು ಪೊಲೀಸರು ಕುಡಿದು ವಾಹನ ಚಲಾಯಿಸಿದ 1,367 ಮಂದಿಯ ವಿರುದ್ಧ ಪ್ರಕರಣವನ್ನು ದಾಖಲಿದ್ದಾರೆ.ಹೊಸ ವರ್ಷದ ಆರಂಭದಲ್ಲೇ ತಪ್ಪು ಕೆಲಸ ಮಾಡಿ ಅವರೆಲ್ಲಾ ಇನ್ನು ನ್ಯಾಯಾಲಯ ಅಲೆಯಬೇಕಾಗಿದೆ.
Comments